1990ರ ದಶಕದ ಕೊನೆಯಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿತ್ತು. ಇದೆಲ್ಲದರ ನಡುವೆ, ಕಾರ್ಯಕರ್ತೆ ಹಾಗೂ ಬರಹಗಾರ್ತಿಯಾಗಿರುವ ಪಶ್ಚಿಮ ಬಂಗಾಳದ ಭಾರತೀಯ ಮಹಿಳೆ ತನ್ನ ಜೀವನದ ಕಥೆಯನ್ನು ಹೇಳಿಕೊಂಡಿದ್ದಾರೆ.
ಬರಹಗಾರ್ತಿ ಸುಶ್ಮಿತಾ ಬ್ಯಾನರ್ಜಿ ಅಥವಾ ಸಯೀದಾ ಕಮಲಾ ಅವರು ಜಾನ್ಬಾಜ್ ಖಾನ್ ಎಂಬ ಅಫ್ಘಾನ್ ಉದ್ಯಮಿಯನ್ನು ವಿವಾಹವಾಗಿದ್ದರು.
‘ಕಾಬುಲಿವಾಲಾರ್ ಬಂಗಾಲಿ ಬೌ’ (ಕಾಬೂಲಿವಾಲಾ ಅವರ ಬಂಗಾಳ ಪತ್ನಿ) ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದರಲ್ಲಿ 1990ರಲ್ಲಿ ತಾಲಿಬಾನ್ ಆಳ್ವಿಕೆಯಲ್ಲಿ ಎದುರಿಸಿದ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ.
ಕೊಲ್ಕೊತ್ತಾದ ಹಿಂದೂ ಕುಟುಂಬದಲ್ಲಿ ಜನಿಸಿದ ಈಕೆ ಜಾನ್ಬಾಜ್ ಅವರನ್ನು ಭೇಟಿಯಾದರು. ಹೆತ್ತವರ ವಿರೋಧದ ನಡುವೆಯೂ ಆತನನ್ನು ರಹಸ್ಯವಾಗಿ ಮದುವೆಯಾಗಿ ಅಫ್ಘಾನಿಸ್ತಾನಕ್ಕೆ ಓಡಿ ಹೋದರು. ಅಘ್ಘಾನಿಸ್ತಾನವನ್ನು ತಲುಪಿದ ಬಳಿಕ ಜಾನ್ಖಾಜ್ ಗೆ ಈಗಾಗಲೇ ಮದುವೆಯಾಗಿರುವ ವಿಷಯ ತಿಳಿಯುತ್ತದೆ. ಇದರಿಂದ ಆಘಾತಗೊಂಡರೂ, ಅಫ್ಘಾನಿಸ್ತಾನದ ಪಾಟಿಯಾ ಹಳ್ಳಿಯಲ್ಲಿರುವ ಅವರ ಪೂರ್ವಿಕರ ಮನೆಯಲ್ಲಿ ಆಕೆಯ ಅತ್ತೆಯೊಂದಿಗೆ ವಾಸಿಸಿದ್ರು. ಆಕೆಯ ಪತಿ ವ್ಯಾಪಾರಕ್ಕಾಗಿ ಭಾರತಕ್ಕೆ ಮರಳಿದರೂ, ಬ್ಯಾನರ್ಜಿಗೆ ಸಾಧ್ಯವಾಗಲಿಲ್ಲ.
ಸಿಎಂ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿಗೆ ಹೊಸ ಸವಾಲು, ಗೆಲ್ಲಲೇಬೇಕಿದೆ ಭವಾನಿಪುರ ಬೈಎಲೆಕ್ಷನ್
ನಂತರ ಅವರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಪ್ರಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ. ಆಕೆಯ ವಿರುದ್ಧ ಫತ್ವಾ ಹೊರಡಿಸಲಾಯಿತು ಮತ್ತು 1995 ರ ಜುಲೈ 22 ರಂದು ಆಕೆಯನ್ನು ಕೊಲ್ಲಲು ನಿರ್ಧರಿಸಲಾಗಿತ್ತು. ಅದೃಷ್ಟವಶಾತ್ ತಪ್ಪಿಸಿಕೊಳ್ಳಲು ಹಳ್ಳಿಯ ಮುಖ್ಯಸ್ಥರು ಸಹಾಯ ಮಾಡಿದರು. ಒಂದು ತಿಂಗಳ ನಂತರ ಕಾಬೂಲ್‌ನಿಂದ ಕೊಲ್ಕತ್ತಾಗೆ ಹಿಂತಿರುಗುವಲ್ಲಿ ಈಕೆ ಯಶಸ್ವಿಯಾದ್ರು.
2013 ರವರೆಗೆ ಭಾರತದಲ್ಲಿ ವಾಸಿಸುತ್ತಿದ್ದ ಬ್ಯಾನರ್ಜಿ ಪುಸ್ತಕಗಳನ್ನು ಪ್ರಕಟಿಸಿದರು. ನಂತರ ಅಫ್ಘಾನಿಸ್ತಾನಕ್ಕೆ ತೆರಳಿದ ಅವರು ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದರು. ಮಹಿಳೆಯರಿಗಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ದುಡಿದಿದ್ದರು. ಇದು ತಾಲಿಬಾನ್ ಆಕೆಯನ್ನು ಗುರಿಯಾಗಿಸಲು ಕಾರಣವಾಯಿತು. 2013ರ ಸೆಪ್ಟೆಂಬರ್ 4 ರ ರಾತ್ರಿ ತಾಲಿಬಾನ್ ಉಗ್ರರು ಬಲವಂತವಾಗಿ ಬ್ಯಾನರ್ಜಿಯ ಮನೆಗೆ ನುಗ್ಗಿ ಕೊಂದು ಹಾಕಿದ್ದರು.
ಬ್ಯಾನರ್ಜಿಯ ಈ ನೈಜ ಜೀವನದ ಕಥೆಯನ್ನು ನಿರ್ದೇಶಕ ಉಜ್ಜಲ್ ಚಟ್ಟೋಪಾಧ್ಯಾಯ ಅವರು ಸಿನಿಮಾದಲ್ಲಿ ಜೀವಂತಗೊಳಿಸಿದ್ದಾರೆ. ‘ಎಸ್ಕೇಪ್ ಫ್ರಮ್ ತಾಲಿಬಾನ್’ ಎಂದು ಸಿನಿಮಾಗೆ ಹೆಸರಿಟ್ಟು, ಇದರಲ್ಲಿ ಸುಶ್ಮಿತಾ ಬ್ಯಾನರ್ಜಿಯ ಪಾತ್ರದಲ್ಲಿ ಮನಿಷಾ ಕೊಯಿರಾಲಾ ನಟಿಸಿದ್ದಾರೆ.