alex Certify ಹಾಳಾದ ಮಾಂಸ ಸಂಗ್ರಹಿಸಿದ್ದ ಹೋಟೆಲ್​ ಗಳ ಮೇಲೆ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಳಾದ ಮಾಂಸ ಸಂಗ್ರಹಿಸಿದ್ದ ಹೋಟೆಲ್​ ಗಳ ಮೇಲೆ ದಾಳಿ

Chennai health officials fine three eateries for storing 30 kg of stale chickenಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಚೆನ್ನೈನ ರಾಯ್ಪೇಟೆಯಲ್ಲಿರುವ ಮೂರು ಉಪಹಾರ ಗೃಹಗಳಲ್ಲಿ 30 ಕೆಜಿ ತೂಕದ ಹಳೆಯ ಚಿಕನ್​ ಮಾಂಸಗಳನ್ನು ಫ್ರೀಜರ್​​ನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.

ಈ ಹಳೆಯ ಮಾಂಸವನ್ನು ಬಿರಿಯಾನಿ ಹಾಗೂ ಸಾಂಬಾರು ಮಾಡಲು ಬಳಕೆ ಮಾಡುವವರಿದ್ದರು ಎನ್ನಲಾಗಿದೆ. ಈ ತಪ್ಪಿಗಾಗಿ ಮೂರು ಉಪಹಾರ ಗೃಹಗಳಿಗೆ ನೋಟಿಸ್​ ನೀಡಲಾಗಿದ್ದು ತಲಾ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಆಹಾರ ಸುರಕ್ಷತಾ ಅಧಿಕಾರಿ ಡಾ. ಸತೀಶ್​ ಕುಮಾರ್, ಹಳೆಯ ಮಾಂಸಕ್ಕೆ ಆಹಾರದ ಬಣ್ಣವನ್ನು ಹಾಕಲಾಗಿತ್ತು. ಈ ಹಾಳಾದ ಮಾಂಸದಿಂದಲೇ ಚಿಕನ್​ ಮಸಾಲೆ ತಯಾರಿಸಲಾಗುತ್ತಿತ್ತು. ಆದರೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಅರ್ನಿ ಉಪಹಾರ ಗೃಹದಲ್ಲಿ ಚಿಕನ್​ ಖಾದ್ಯ ಸೇವಿಸಿದ 10 ವರ್ಷದ ಬಾಲಕಿ ಶುಕ್ರವಾರ ಸಾವನ್ನಪ್ಪಿದ್ದಳು.

ಪಾಕ್ ಏಜೆಂಟ್ ಗೆ ಸೇನೆಯ ರಹಸ್ಯ ದಾಖಲೆ ಪೂರೈಕೆ ಆರೋಪ: ಅಂಚೆ ಇಲಾಖೆ ಅಧಿಕಾರಿ ಅರೆಸ್ಟ್

ಅಲ್ಲದೇ 20ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿಗಳು ಮಾಂಸಗಳನ್ನು ಸರಿಯಾದ ಕ್ರಮದಲ್ಲಿ ಶೇಖರಣೆ ಮಾಡದೇ ಇರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...