alex Certify ʼನ‌ಮ್ಮ ಮೆಟ್ರೋʼ ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನ‌ಮ್ಮ ಮೆಟ್ರೋʼ ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ಅಂದಾಜು 3 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಏರ್​ಪೋರ್ಟ್ ಮೆಟ್ರೋ ಸೇವೆ 2026ರ ವೇಳೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ. ಈ ಮಾರ್ಗದಲ್ಲಿ ರೈಲು ಚಲಿಸುವ ವೇಗವನ್ನು ದ್ವಿಗುಣಗೊಳಿಸುವ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಬೇರೆಲ್ಲ ಮಾರ್ಗಗಳಲ್ಲಿ ಚಲಿಸುವ ಮೆಟ್ರೋ ರೈಲಿನ ವೇಗಕ್ಕಿಂತ ಯಲಹಂಕದಿಂದ ಏರ್​ಪೋರ್ಟ್ ಟರ್ಮಿನಲ್​​ನಲ್ಲಿ ಸಂಚರಿಸುವ ಮೆಟ್ರೋದ ವೇಗವನ್ನು ದ್ವಿಗುಣಗೊಳಿಸಲು ಅಂದರೆ ಗಂಟೆಗೆ 60 ಕಿಲೋಮೀಟರ್​ ವೇಗ ನಿಗದಿ ಮಾಡಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಪ್ರಸ್ತುತ ಬಿಎಂಆರ್​ಸಿಎಲ್​ನ ಎಲ್ಲಾ ಮೆಟ್ರೋ ರೈಲುಗಳು ಗಂಟೆಗೆ 30 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಮಾತ್ರ 60 ಕಿಲೋಮೀಟರ್​ ಪ್ರತಿ ಗಂಟೆ ವೇಗದಲ್ಲಿ ಸಂಚರಿಸಲಿದೆ ಎಂದು ಯೋಜನಾ ವರದಿಯು ಮಾಹಿತಿ ನೀಡಿದೆ.

ವರ್ಗಾವಣೆ ಬಯಸಿದ್ದ 75 ಸಾವಿರ ಶಿಕ್ಷಕರಿಗೆ ಬಿಗ್ ಶಾಕ್

37 ಕಿಲೋಮೀಟರ್​ ಉದ್ದದ ಮಾರ್ಗದಲ್ಲಿ 17 ನಿಲ್ದಾಣಗಳು ಇರಲಿವೆ. ಕಸ್ತೂರಿನಗರ, ಹೊರಮಾವು, ಹೆಚ್​ಆರ್​ಬಿಆರ್ ಲೇಔಟ್​, ಕಲ್ಯಾಣ ನಗರ, ಹೆಚ್​ಬಿಆರ್ ಲೇಔಟ್​, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆ ಹಳ್ಳಿ, ಜಕ್ಕೂರು ಕ್ರಾಸ್​, ಯಲಹಂಕ, ಬಾಗಲೂರು ಕ್ರಾಸ್​, ಬೆಟ್ಟಹಲಸೂರು, ಟ್ರಂಪೆಟ್​ ಜಂಕ್ಷನ್​, ಕೆಐಎ ವೆಸ್ಟ್​, ಹಾಗೂ ಏರ್​ಪೋರ್ಟ್ ಟರ್ಮಿನಲ್​ನಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...