ಕೊರೊನಾ ವೈರಸ್ ಎಂದಿಗೂ ಕಣ್ಮರೆಯಾಗುವುದಿಲ್ಲ. ಉದಾಹರಣೆಗೆ 2009 ರಲ್ಲಿದ್ದ ಸಾಂಕ್ರಾಮಿಕ ರೋಗವು ಇನ್ನೂ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೆಲ್ತ್ ಎಮರ್ಜೆನ್ಸಿ ಕಾರ್ಯಕ್ರಮದ ನಿರ್ದೇಶಕ ಡಾ. ಮೈಕ್ ರಯಾನ್ ಹೇಳಿದ್ದಾರೆ.
ಲಸಿಕೆ ಪ್ರಮಾಣವನ್ನು ಹೆಚ್ಚಿಸುವುದರಿಂದ ಕೊರೊನಾ ವಿರುದ್ದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ರಯಾನ್ ಹೇಳಿದ್ದಾರೆ.
ಕಡಿಮೆ ಮಟ್ಟದ ಸೋಂಕು ಹರಡುವಿಕೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಆದರೆ ಇಲ್ಲಿಯವರೆಗೂ ಕೊರೊನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಕ್ರಾಮಿಕವಾಗಿಯೇ ಮುಂದುವರಿದಿದೆ ಎಂದು ಹೇಳಿದರು. 2009ರಲ್ಲಿ ಆರಂಭವಾಗಿರುವ H1N1 ಸಾಂಕ್ರಾಮಿಕವು 2,84,500 ಮಂದಿಯನ್ನು ಬಲಿ ಪಡೆದಿತ್ತು. ಇದೀಗ ಕೊರೊನಾ ಕೂಡಾ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ.