
ನವದೆಹಲಿ: ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ನಾನ್ ಟೆಲಿಕಾಂ ಆದಾಯವನ್ನು ಎಜಿಆರ್ ನಿಂದ ಹೊರಗಿಡಲಾಗಿದೆ. ನಾನ್ ಟೆಲಿಕಾಂ ಆದಾಯ ಎಜಿಆರ್ ಭಾಗವಾಗಿರಲಿಲ್ಲ.
20 ವರ್ಷದ ಬಳಿಕ ಸ್ಪೆಕ್ಟ್ರಂ ಸೆರಂಡರ್ ಮಾಡಬಹುದಾಗಿದೆ. ಸ್ಪೆಕ್ಟ್ರಮ್ ಕ್ಷೇತ್ರದಲ್ಲಿ ಶೇಕಡ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ.
ಸಿಮ್ ಕಾರ್ಡ್ ದಾಖಲೆ, ಕೆವೈಸಿ ಎಲ್ಲವನ್ನೂ ಡಿಜಿಟಲೈಸ್ ಮಾಡಲಾಗುತ್ತದೆ. ಮೊಬೈಲ್ ನಂಬರ್ ಕೆವೈಸಿ ಪ್ರಕ್ರಿಯೆಯನ್ನು ಸರಳೀಕರಣ ಮಾಡಲಾಗುವುದು. ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಕೆವೈಸಿ ಪ್ರಕ್ರಿಯೆಗಾಗಿ ಹೆಚ್ಚುವರಿ ದಾಖಲೆಗಳು ಬೇಕಿಲ್ಲ. 4ಜಿ ಮತ್ತು 5ಜಿ ಟೆಕ್ನಾಲಜಿಯನ್ನು ಭಾರತದಲ್ಲಿ ತಯಾರಿಸಲಾಗುತ್ತದೆ.
ಕಂಪನಿಗಳ ಬಾಕಿ ಹಣ ಪಾವತಿಗೆ 4 ವರ್ಷಗಳ ಮೊರಾಟೋರಿಯಂ ಅವಧಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, 4 ವರ್ಷದ ಅವಧಿಯಲ್ಲಿ ಬಡ್ಡಿಯನ್ನು ಪಾವತಿಸಬೇಕಿದೆ. 3 ರಿಂದ 4 ವರ್ಷದ ಅವಧಿಗೆ ಅನ್ವಯವಾಗುವಂತೆ ಬಡ್ಡಿ ಪಾವತಿಸಬೇಕಿದೆ. ಈ ಮೂಲಕ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ ಎಂದು ಹೇಳಲಾಗಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಹೆಚ್ಚಿನ ಕಂಪನಿಗಳು ಟೆಲಿಕಾಂ ಕ್ಷೇತ್ರದಲ್ಲಿ ಇರಬೇಕು. ಗ್ರಾಹಕರಿಗೆ ಕಂಪನಿಯ ಸೇವೆ ಆಯ್ಕೆಗೆ ಅವಕಾಶ ಇರಬೇಕು. ಮೊರಾಟೋರಿಯಂ ಅವಧಿಯಲ್ಲಿ ಬಡ್ಡಿ ಪಾವತಿಸಬೇಕು. ಬಡ್ಡಿ ಪಾವತಿಸುವುದರಿಂದ ಸರ್ಕಾರದ ಆದಾಯಕ್ಕೆ ರಕ್ಷಣೆ ಇರಲಿದೆ. ಈ ಸೌಲಭ್ಯ ಟೆಲಿಕಾಂ ಕ್ಷೇತ್ರಕ್ಕೆ ಅನ್ವಯವಾಗಲಿದೆ ಎಂದು ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.