alex Certify ಶಾಕಿಂಗ್​: ಮಹಿಳೆ ಸತ್ತು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಮಹಿಳೆ ಸತ್ತು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ….!

ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಗೆ ಸೆಪ್ಟೆಂಬರ್​ 8ರಂದು ಕೋವಿಡ್​ ಲಸಿಕೆ ಹಾಕಿಸಿದ ವಿಚಿತ್ರ ಘಟನೆಯು ಮೀರತ್​ ಜಿಲ್ಲೆಯ ಸರ್ಧನ ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯ ಸಹೋದರ ವಾಸಿಂ ಮೊಬೈಲ್​ನಲ್ಲಿ ಲಸಿಕೆ ಯಶಸ್ವಿಯಾಗಿದೆ ಎಂಬ ಸಂದೇಶ ಸ್ವೀಕರಿಸಿದ ಬಳಿಕ ಆರೋಗ್ಯ ಕೇಂದ್ರದ ಯಡವಟ್ಟು ಬೆಳಕಿಗೆ ಬಂದಿದೆ.

ಪುರಸಭೆಯು ಮೃತ ಫರಾಳ ಮರಣ ಪ್ರಮಾಣ ಪತ್ರ ನೀಡಿದರೂ ಸಹ ಲಸಿಕಾ ಕೇಂದ್ರದಲ್ಲಿ ಫರಾಳ ಆಧಾರ್​ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸೆಪ್ಟೆಂಬರ್​ 8ರಂದು ಕೊರೊನಾ ಲಸಿಕೆ ನೀಡಿದ ಬಗ್ಗೆ ದಾಖಲೆ ನೀಡಿದೆ.

ಈ ಬಗ್ಗೆ ಮೃತ ಫರಾಳ ಸಹೋದರ ಆರೋಗ್ಯ ಕೇಂದ್ರದಲ್ಲಿ ವಿಚಾರಣೆ ಮಾಡಿದ ವೇಳೆಯಲ್ಲಿ ಅಲ್ಲಿನ ಸಿಬ್ಬಂದಿ ಹಾರಿಕೆಯ ಉತ್ತರವನ್ನು ನೀಡಿದ್ದಾರೆ.
ಈ ಘಟನೆಯು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದರೂ ಸಹ ತಾವು ಮಾಡಿರುವ ಯಡವಟ್ಟುಗಳ ಬಗ್ಗೆ ಇಲ್ಲಿಯವರೆಗೆ ಆರೋಗ್ಯ ಕೇಂದ್ರವು ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...