alex Certify ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಆನ್ ಲೈನ್ ಫುಡ್ ಡೆಲಿವರಿ ಮೇಲೆ ಬೀಳಲಿದೆ ʼGSTʼ ಹೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಆನ್ ಲೈನ್ ಫುಡ್ ಡೆಲಿವರಿ ಮೇಲೆ ಬೀಳಲಿದೆ ʼGSTʼ ಹೊರೆ

ಜೊಮ್ಯಾಟೋ ಹಾಗೂ ಸ್ವಿಗ್ಗಿಯಂತಹ ಆಹಾರ ವಿತರಣಾ ಅಪ್ಲಿಕೇಶನ್ ​ಗಳನ್ನೂ ಸರಕು ಹಾಗೂ ಸೇವಾ ತೆರಿಗೆ ಮಂಡಳಿಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಪರಿಣಾಮವಾಗಿ ಇನ್ಮುಂದೆ ಡೆಲಿವರಿ ಅಪ್ಲಿಕೇಶನ್ ​ಗಳಲ್ಲಿ ಫುಡ್​​ ಆರ್ಡರ್​ ಮಾಡಿದಾಗ ಜಿ.ಎಸ್.​ಟಿ. ಬೀಳಲಿದೆ ಎನ್ನಲಾಗಿದೆ.

ಜಿ.ಎಸ್.​ಟಿ. ಕೌನ್ಸಿಲ್​ ಸಭೆಯಲ್ಲಿ ಆಹಾರ ವಿತರಣಾ ಅಪ್ಲಿಕೇಶನ್​ ಗಳನ್ನು ರೆಸ್ಟೋರೆಂಟ್​ ಸೇವೆಗಳ ಅಡಿಯಲ್ಲೇ ತರಲು ಪ್ಲಾನ್​ ಮಾಡಲಾಗಿದೆ. ಈ ಮೂಲಕ ಫುಡ್​ ಡೆಲಿವರಿ ಸೇವೆಗಳ ಮೇಲೂ ಜಿ.ಎಸ್.​ಟಿ. ವಿಧಿಸುವ ಸಾಧ್ಯತೆ ಇದೆ.

ಶುಕ್ರವಾರದ ಜಿ.ಎಸ್​.ಟಿ. ಕೌನ್ಸಿಲ್​ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತೆರಿಗೆ ದರ ಬದಲಾವಣೆಗಳ ಕುರಿತು ಸಲಹೆ ನೀಡುವ ವಿವಿಧ ರಾಜ್ಯದ ಅಧಿಕಾರಿಗಳನ್ನು ಒಳಗೊಂಡ ಫಿಟ್​ಮೆಂಟ್​ ಸಮಿತಿಯು ರೆಸ್ಟೋರೆಂಟ್​ ಸೇವೆಗಳನ್ನು ಜನತೆಗೆ ಸರಬರಾಜು ಮಾಡುವ ಇ ಕಾಮರ್ಸ್​ ಆಪರೇಟರ್​ಗಳನ್ನೂ ರೆಸ್ಟೋರೆಂಟ್​ ಸೇವೆಗಳ ವ್ಯಾಪ್ತಿಗೆ ತರುವಂತೆ ಸಲಹೆ ನೀಡಿದೆ. ಒಂದು ವೇಳೆ ಈ ಸಲಹೆಯು ಕಾರ್ಯರೂಪಕ್ಕೆ ಬಂದಲ್ಲಿ ಸ್ವಿಗ್ಗಿ, ಜೊಮ್ಯಾಟೋದಂತಹ ಅಪ್ಲಿಕೇಶನ್ ​ಗಳೂ ಸಹ ಜಿ.ಎಸ್.​ಟಿ. ಪಾವತಿ ವ್ಯಾಪ್ತಿಯಲ್ಲಿಯೇ ಬರಲಿದೆ. ಈ ಮೂಲಕ ಆಹಾರ ಪ್ರಿಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...