alex Certify 101 ನೇ ವಯಸ್ಸಿನಲ್ಲೂ ಅಪಾಯಕಾರಿ ಕೆಲಸ ಮಾಡುತ್ತಾರೆ ವೃದ್ದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

101 ನೇ ವಯಸ್ಸಿನಲ್ಲೂ ಅಪಾಯಕಾರಿ ಕೆಲಸ ಮಾಡುತ್ತಾರೆ ವೃದ್ದೆ…!

70 ಅಥವಾ 80ರ ಇಳಿ ವಯಸ್ಸಿನಲ್ಲಿರುವ ಬಹುತೇಕ ಹಿರಿಯರು ತಮ್ಮ ಬಿಡುವಿಲ್ಲದ ಜೀವನಶೈಲಿಗೆ ವಿರಾಮ ಹಾಕುತ್ತಾರೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಾರೆ. ಆದರೆ, ಇಲ್ಲೊಬ್ಬರು ವೃದ್ಧೆ 101 ವಯಸ್ಸಾದರೂ ಕೂಡ ಅಪಾಯಕಾರಿ ಕೆಲಸ ಮಾಡುತ್ತಾರೆ.

ಹೌದು, ಶತಾಯುಷಿಯಾಗಿರುವ ಈ ವೃದ್ಧೆಯು ತಮ್ಮ 78 ಹಾಗೂ 79 ವಯಸ್ಸಿನ ಇಬ್ಬರು ಗಂಡು ಮಕ್ಕಳೊಂದಿಗೆ ಅಪಾಯಕಾರಿ ಸಮುದ್ರ ಕೆಲಸ ಮಾಡುತ್ತಿದ್ದಾರೆ. ಆಲಿವರ್ ಎಂಬ ವೃದ್ಧೆಯು ತನ್ನ ಜೀವನದುದ್ದಕ್ಕೂ ಮೀನು ಹಿಡಿಯುವ ಕೆಲಸ ಮಾಡುತ್ತಾ ಬಂದಿದ್ದಾರೆ. ತನ್ನ 8ನೇ ವಯಸ್ಸಿನಲ್ಲಿ ಈ ಕೆಲಸ ಮಾಡಲು ಶುರು ಮಾಡಿದ್ದರಂತೆ.

ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ 1500 ರೂ. ಹೆಚ್ಚಳ

ತಾನು ಇದರೊಂದಿಗೆ ಬೆಳೆದಿದ್ದು, ಇದು ಕಷ್ಟದ ಕೆಲಸವೇನಲ್ಲ. ತನ್ನ ಕೆಲಸವನ್ನು ಪ್ರೀತಿಸುವುದಾಗಿ ಆಲಿವರ್ ಹೇಳಿದ್ದಾರೆ. ಮೇ ಹಾಗೂ ನವೆಂಬರ್ ನಡುವೆ ವಾರದಲ್ಲಿ ಕನಿಷ್ಠ ಮೂರು ಬಾರಿ ತೆರೆದ ಸಮುದ್ರಕ್ಕೆ ಆಲಿವರ್ ಹೋಗುತ್ತಾರೆ.

ತನ್ನ ಜೀವನದಲ್ಲಿ ಹಲವು ಏಳು-ಬೀಳುಗಳು ಇದ್ದರೂ ಕೂಡ ಆಕೆ ತನ್ನ ವೃತ್ತಿ ಬಿಡಲಿಲ್ಲ. ತೀರಾ ಇತ್ತೀಚೆಗೆ ಆಲಿವರ್ ಗಾಯಗೊಂಡಿದ್ದು, 7 ಹೊಲಿಗೆಗಳನ್ನು ಹಾಕಲಾಗಿದೆ. ಆದರೂ ಕೂಡ ತನ್ನ ಕೆಲಸವನ್ನು ನಿಲ್ಲಿಸಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...