ಪಾಕಿಸ್ತಾನ ಮಿಲಿಟರಿ ಬೇಹುಗಾರಿಕೆಯ ನರಿಬುದ್ಧಿ ಹೇಳತೀರದು. ಚೆಂದದ ಯುವತಿಯರಂತೆ ವರ್ತಿಸಿ, ಯೋಧರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪಾಕ್ ಬೇಹುಗಾರಿಕೆ ಸಂಸ್ಥೆ ’ಐಎಸ್ಐ’ನ ಯುವತಿಯರು ಹನಿಟ್ರ್ಯಾಪ್ ಮಾಡಿ ಭಾರತೀಯ ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಪಡೆದುಕೊಳ್ಳಲು ಈಗಾಗಲೇ ಹಲವು ಬಾರಿ ಯತ್ನಿಸಿದ್ದಾರೆ.
ಇಂಥದ್ದೇ ಪ್ರಕರಣವೊಂದು ಇತ್ತೀಚೆಗೆ ಪಂಜಾಬಿನ ಲುಧಿಯಾನದಲ್ಲಿ ಬೆಳಕಿಗೆ ಬಂದಿದೆ. ‘ಜಸ್ಲೀನ್ ಬ್ರಾರ್ ‘ ಎಂದು ಯುವತಿಯೊಬ್ಬಳು ಫೇಸ್ ಬುಕ್ನಲ್ಲಿ ಲುಧಿಯಾನ ನಿವಾಸಿಯಾದ ಜಸ್ವಿಂದರ್ ಸಿಂಗ್ ಎಂಬಾತನಿಗೆ ಪರಿಚಯವಾದಳು. ಭಟಿಂಡಾ ಕಂಟೋನ್ಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನೆಯ ಅಕೌಂಟ್ಸ್ ವಿಭಾಗದ ಮಹಿಳೆ ಎಂದು ಸಿಂಗ್ ವಿಶ್ವಾಸವನ್ನು ಜಸ್ಲೀನ್ ಗಳಿಸಿಕೊಂಡಿದ್ದಾಳೆ.
ಮಾಜಿ ರಾಜತಾಂತ್ರಿಕನ ಮಗಳ ಶಿರಚ್ಛೇದ ಮಾಡಿದ ಕಿರಾತಕ…..!
ಸೇನೆಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್, ಜಸ್ಲೀನ್ಗೆ ಕೆಲವು ದಿನಗಳ ಬಳಿಕ ರಕ್ಷ ಣಾ ಸಿಬ್ಬಂದಿಯ ಅನಧಿಕೃತ ವಾಟ್ಸಾಪ್ ಗ್ರೂಪ್ಗಳ ಸಂಖ್ಯೆ ಕೊಟ್ಟು ಅದಕ್ಕೆ ಸೇರ್ಪಡೆಯಾಗಲು ನೆರವಾಗಿದ್ದಾರೆ.
ಇದೇ ಅವಕಾಶ ಬಳಸಿಕೊಂಡ ಜಸ್ಲೀನ್, ಗ್ರೂಪ್ನಲ್ಲಿನ ಏಳು ಯೋಧರನ್ನು ಗೌಪ್ಯ ಮಾಹಿತಿ ಪಡೆಯಲು ಹನಿಟ್ರ್ಯಾಪ್ಗೆ ಬೀಳಿಸಲು ಯತ್ನಿಸಿ ವಿಫಲವಾಗಿದ್ದಾಳೆ. ಭಾರತೀಯ ರಕ್ಷಣಾ ಬೇಹುಗಾರಿಕೆ ಹಾಗೂ ಪಂಜಾಬ್ ಪೊಲೀಸರು ಜಸ್ಲೀನ್ ಎಂಬಾಕೆಯು ಪಾಕಿಸ್ತಾನ ಬೇಹುಗಾರಿಕೆ ಸೇವೆಯ ಸಿಬ್ಬಂದಿ ಎಂದು ಪತ್ತೆ ಮಾಡಿ, ಯೋಧರನ್ನು ಎಚ್ಚರಿಸಿದ್ದಾರೆ.
ಪಾಕ್ ಏಜೆಂಟ್ನಿಂದ 10 ಸಾವಿರ ರೂ. ಪಡೆದು ವಾಟ್ಸಾಪ್ ಸಂಖ್ಯೆ ಕೊಟ್ಟ ಜಸ್ವಿಂದರ್ನನ್ನು ಬಂಧಿಸಲಾಗಿದೆ.