alex Certify ವರನಿಗೆ ಚಳ್ಳೆಹಣ್ಣು ತಿನ್ನಿಸಿ ಚಿನ್ನಾಭರಣ ಸಮೇತ ನವ ವಿವಾಹಿತೆ ಎಸ್ಕೇಪ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನಿಗೆ ಚಳ್ಳೆಹಣ್ಣು ತಿನ್ನಿಸಿ ಚಿನ್ನಾಭರಣ ಸಮೇತ ನವ ವಿವಾಹಿತೆ ಎಸ್ಕೇಪ್​…!

ನವವಿವಾಹಿತೆಯೊಬ್ಬಳು ತನ್ನ ಪತಿ ಹಾಗೂ ಅತ್ತೆಯ ಒಡವೆ, ನಗದು ಕದ್ದು ಪರಾರಿಯಾದ ಸಿನಿಮೀಯ ಘಟನೆಯೊಂದು ಉತ್ತರ ಪ್ರದೇಶದ ಮೈನ್​ಪುರಿ ಎಂಬಲ್ಲಿ ನಡೆದಿದೆ. ತನ್ನ ಪತಿಯ ಜೊತೆಗೆ ತವರು ಮನೆಗೆ ತೆರಳುತ್ತಿದ್ದ ವೇಳೆ ನವವಿವಾಹಿತೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.

ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ರಾಜು ಎಂಬಾತ ಮಧ್ಯವರ್ತಿಯ ಸಹಾಯದಿಂದ ಈ ವಧುವಿನ ಜೊತೆಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ರಾಜು ತಂದೆ ವಧುದಕ್ಷಿಣೆ ರೂಪದಲ್ಲಿ 80 ಸಾವಿರ ರೂಪಾಯಿಯನ್ನೂ ನೀಡಿದ್ದರು.

ಆಗಸ್ಟ್​ 17ರಂದು ರಾಜು ವಿವಾಹ ನೆರವೇರಿತ್ತು. ವರನ ಕಡೆಯವರೇ ವಧುವಿನ ಉಡುಪು, ಆಭರಣ ಸೇರಿದಂತೆ ಸಾಕಷ್ಟು ಉಡುಗೊರೆಗಳನ್ನು ನೀಡಿದ್ದರು. ಬಸ್​ ನಿಲ್ದಾಣಕ್ಕೆ ಬಂದಿದ್ದ ವೇಳೆ ಪತ್ನಿ, ರಾಜು ಬಳಿ ತನಗೆ ಬಾಯಾರಿಕೆಯಾಗುತ್ತಿದೆ ಹೀಗಾಗಿ ನೀರಿನ ಬಾಟಲಿ ತಂದುಕೊಡುವಂತೆ ಹೇಳಿದ್ದಳು ಎನ್ನಲಾಗಿದೆ.

ರಾಜು ನೀರಿನ ಬಾಟಲಿಯ ಜೊತೆಗೆ ವಾಪಸ್ಸಾದ ವೇಳೆ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಆಕೆ ಎಲ್ಲಾ ಸಾಮಾನು ಸಮೇತ ಸ್ಥಳದಿಂದ ಕಣ್ಮರೆಯಾಗಿದ್ದಳು. ಈ ಸಂಬಂಧ ರಾಜು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...