alex Certify ಆ ಒಂದು ಕೆಲಸ ಮಾಡಿ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ ಎಂದ ಕಂಗನಾ ರಣಾವತ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ ಒಂದು ಕೆಲಸ ಮಾಡಿ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ ಎಂದ ಕಂಗನಾ ರಣಾವತ್​…..!

ಬಾಲಿವುಡ್​ ನಟಿ ಕಂಗನಾ ರಣಾವತ್​​ ತಮ್ಮ ಸಿನಿಮಾಗಳಿಗಿಂತ ನಿಷ್ಠುರ ನುಡಿಯ ಮೂಲಕವೇ ಹೆಚ್ಚು ಸುದ್ದಿಯಲ್ಲಿರ್ತಾರೆ. ಸಮಾಜದಲ್ಲಿ ಸಮಸ್ಯೆಗಳು ಹಾಗೂ ರಾಜಕೀಯ ವಿಚಾರಗಳ ಬಗ್ಗೆ ನೇರ ನುಡಿಯನ್ನು ಮಾತನಾಡುವುದರಲ್ಲಿ ಕಂಗನಾ ಎತ್ತಿದ ಕೈ ಎನಿಸಿಬಿಟ್ಟಿದ್ದಾರೆ.

ಆರ್​ಜೆ ರೌನಕ್​ ಜೊತೆ ಸಂದರ್ಶನದಲ್ಲಿ ಭಾಗಿಯಾದ ಕಂಗನಾ ರಣಾವತ್​ ರಾಜಕೀಯ ಅಭಿಪ್ರಾಯಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹೊರಹಾಕಿದ್ದರಿಂದ ತಾವು ಎಷ್ಟೆಲ್ಲ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ನಾನು ದೇಶದ ಸುತ್ತಲೂ ನೋಡಿದಾಗ, ಒಟ್ಟ ನಟಿಯಾಗಿ ದೇಶವನ್ನು ಒಡೆಯುವಂತಹ ಮಾತನಾಡಿದರೆ ಯಾರಿಗೂ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ನೀವು ದೇಶವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡಿದರೆ ಮಾತ್ರ ನಿಜವಾದ ಸಮಸ್ಯೆ ಶುರುವಾಗುತ್ತದೆ. ನನ್ನ ರಾಜಕೀಯ ನೇರ ನುಡಿಗಳಿಂದಾಗಿ ಸಾಕಷ್ಟು ಪರಿಣಾಮಗಳನ್ನು ಎದುರಿಸಿದ್ದೇನೆ. ಸಾಕಷ್ಟು ಬ್ರ್ಯಾಂಡ್​ಗಳು ನನ್ನ ಕೈತಪ್ಪಿ ಹೋದವು. ಅನೇಕ ಒಪ್ಪಂದಗಳನ್ನು ಕೊನೆಗೊಳಿಸಬೇಕಾದ ಪರಿಸ್ಥಿತಿ ಬಂತು. ಇದೆಲ್ಲದರಿಂದ ನನಗೆ ಕೋಟಿಗಟ್ಟಲೇ ನಷ್ಟ ಉಂಟಾಗಿದೆ ಎಂದು ಕಂಗನಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್​ಗಳ ಬಗ್ಗೆ ನೀವು ಎರಡು ಬಾರಿ ಯೋಚನೆ ಮಾಡುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಂಗನಾ, ನನ್ನದು ನೇರ ನುಡಿ. ಹೀಗಾಗಿ ನನಗೆ ಎರಡು ಬಾರಿ ಯೋಚನೆ ಮಾಡುವ ಅವಶ್ಯಕತೆ ಬರಲೇ ಇಲ್ಲ. ನನಗೆ ಎರಡು ಮುಖಗಳಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಒಂದು ಮುಖ, ವೈಯಕ್ತಿಕವಾಗಿ ಇನ್ನೊಂದು ಮುಖವನ್ನು ನಾನು ಹೊಂದಿಲ್ಲ. ನನಗೆ ಏನು ಅನಿಸುತ್ತದೆಯೋ, ನಾನದನ್ನು ನೇರವಾಗಿಯೇ ಹೇಳುತ್ತೇನೆ ಎಂದು ಹೇಳಿದ್ರು.

ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿ ವಿಚಾರವಾಗಿಯೂ ಮಾತನಾಡಿದ ಕಂಗನಾ, ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿರುವ ಒಗ್ಗಟ್ಟು ಬಾಲಿವುಡ್​ನಲ್ಲಿಲ್ಲ. ಇಲ್ಲಿ ಹೊಟ್ಟೆಕಿಚ್ಚು ಪಡುವ ಸಾಕಷ್ಟು ಜನರಿದ್ದಾರೆ. ಇದು ಒಂದಲ್ಲ ಒಂದಿನ ಬದಲಾವಣೆಯಾಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದ್ರು.

ನೀವು ಇನ್​ಸ್ಟಾಗ್ರಾಂನಲ್ಲಿ ಯಾರನ್ನು ಅನ್​ಫಾಲೋ ಮಾಡಲು ಬಯಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಫನ್ನಿಯಾಗಿ ರಂಗೋಲಿ ಚಾಂಡೇಲಾ ಎಂದು ಕಂಗನಾ ಉತ್ತರಿಸಿದ್ದಾರೆ. ಕಾರ್ಯಕ್ರಮದಲ್ಲೇ ರಂಗೋಲಿಗೆ ಕರೆ ಮಾಡಿ ನನ್ನ ಜೀವನದಲ್ಲಿ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ರಂಗೋಲಿ ಆದರೆ ನಾನು ನಿನ್ನ ಜೀವನದಲ್ಲಿ ಇರುತ್ತೇನೆ ಎಂದು ಹೇಳಿದ್ರು. ಇದಕ್ಕೆ ಕಂಗನಾ ಇದು ಸಹೋದರಿಯ ಪ್ರೇಮ ಎಂದು ಉತ್ತರಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...