ಇಂದು, ಆಧಾರ್ ಕಾರ್ಡ್ ಅತ್ಯಂತ ಅಗತ್ಯ ದಾಖಲೆಯಾಗಿದೆ. ಆಧಾರ್ ಇಲ್ಲದವರು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಹೊಂದುವುದು ಈಗ ಅನಿವಾರ್ಯವಾಗಿದೆ.
ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವೇಳೆ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಸರಿಯಾದ ದಾಖಲೆ ನೀಡದೆ ಹೋದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಬೇಗ ನಿಮಗೆ ಆಧಾರ್ ನಂಬರ್ ಸಿಗುವುದಿಲ್ಲ. ಪದೇ ಪದೇ ಆಧಾರ್ ಕೇಂದ್ರಕ್ಕೆ ಅಲೆಯಬೇಕಾಗುತ್ತದೆ.
ವಿಳಾಸ : ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ, ವಿಳಾಸ ಮತ್ತು ಪಿನ್ ಕೋಡ್ ಪರಿಶೀಲಿಸಿ. ಯುಐಡಿಎಐ ನೀಡಿದ ಆಧಾರ್ ಅರ್ಜಿ ನಮೂನೆಯಲ್ಲಿ ಹಾಕಿದ ವಿಳಾಸವನ್ನು ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ. ಹಾಗಾಗಿ ಆದಷ್ಟು ನಿಮ್ಮ ಶಾಶ್ವತ ವಿಳಾಸವನ್ನು ಆಧಾರ್ ಗೆ ನೀಡಿ.
ಹೆಸರಿನ ಕಾಗುಣಿತ : ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಅಥವಾ ಯಾವುದೇ ಅಪ್‌ಡೇಟ್ ಮಾಡುವಾಗ ಹೆಸರಿನ ಕಾಗುಣಿತವು ಇತರ ದಾಖಲೆಗಳಲ್ಲಿ ಇರುವಂತೆ ಇರಬೇಕು. ಕಾಗುಣಿತ ತಪ್ಪಾದಲ್ಲಿ ಸಮಸ್ಯೆಯಾಗುತ್ತದೆ. ಮತ್ತೆ ನವೀಕರಣ ಮಾಡಬೇಕಾಗುತ್ತದೆ.
ಹುಟ್ಟಿದ ದಿನಾಂಕ : ಜನ್ಮ ದಿನಾಂಕವನ್ನು ಆಧಾರ್ ಕಾರ್ಡ್‌ನಲ್ಲಿ ನಮೂದಿಸುವಾಗ ಜಾಗರೂಕರಾಗಿರಿ. ಜನ್ಮ ದಿನಾಂಕವನ್ನು ಪರಿಶೀಲಿಸಲು ದಾಖಲೆ ನೀಡಬೇಕಾಗುತ್ತದೆ. ಜನ್ಮ ದಿನಾಂಕವನ್ನು ದೃಢೀಕರಿಸಲು ನೀಡುವ ದಾಖಲೆಯಲ್ಲಿ ನಮೂದಿಸಿದ ಜನ್ಮ ದಿನಾಂಕವನ್ನೇ ಅರ್ಜಿಯಲ್ಲೂ ನಮೂದಿಸಿ.
ತಿದ್ದುಪಡಿ : ಆಧಾರ್ ಕಾರ್ಡ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಸಂಬಂಧಪಟ್ಟ ಕಚೇರಿಗೆ ಅಥವಾ ಆನ್‌ಲೈನ್ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಸರಿಪಡಿಸಬಹುದು.