alex Certify ಟೂತ್ ಪೇಸ್ಟ್ ಎಂದು ತಪ್ಪಾಗಿ ಇಲಿ ವಿಷದಿಂದ ಹಲ್ಲುಜ್ಜಿ ಬಾಲಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೂತ್ ಪೇಸ್ಟ್ ಎಂದು ತಪ್ಪಾಗಿ ಇಲಿ ವಿಷದಿಂದ ಹಲ್ಲುಜ್ಜಿ ಬಾಲಕಿ ಸಾವು

ಮುಂಬೈ: 18 ವರ್ಷದ ಹುಡುಗಿಯೊಬ್ಬಳು ಟೂತ್ ಪೇಸ್ಟ್ ಎಂದು ಭಾವಿಸಿ ತಪ್ಪಾಗಿ ಇಲಿ ವಿಷದಿಂದ ಹಲ್ಲುಜ್ಜಿದ ಕಾರಣ ಮೃತಪಟ್ಟಿರುವ ವಿಲಕ್ಷಣ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ.

ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಫ್ಸಾನಾ ಖಾನ್ ಎಂಬಾಕೆ ಎಂದಿನಂತೆ ಎದ್ದು ಹಲ್ಲುಜ್ಜಲು ಹೋದಾಗ ಈ ವಿಚಿತ್ರ ಘಟನೆ ಸಂಭವಿಸಿದೆ. ಸ್ವಲ್ಪ ನಿದ್ರಾವಸ್ಥೆಯಲ್ಲಿದ್ದ ಅವಳು ತಪ್ಪಾಗಿ ಟೂತ್ ಪೇಸ್ಟ್ ಟ್ಯೂಬ್ ಪಕ್ಕದಲ್ಲಿದ್ದ ಇಲಿ ವಿಷದ ಕ್ರೀಮ್ ಟ್ಯೂಬ್ ಅನ್ನು ತೆಗೆದುಕೊಂಡು ಹಲ್ಲುಗಳನ್ನು ಉಜ್ಜಿದ್ದಾಳೆ.

ಎಚ್ಚರ…..! ನಿದ್ರೆ ಮಾಡುವಾಗ ಬಾಯಿಯಲ್ಲಿ ಉಸಿರಾಡ್ತಿರಾ……?

ರುಚಿ ಮತ್ತು ವಾಸನೆಯ ವ್ಯತ್ಯಾಸವನ್ನು ಅರಿತ ಆಕೆ ಕೂಡಲೇ ಪೇಸ್ಟ್ ಉಗುಳುತ್ತಾ, ತನ್ನ ಬಾಯಿಯನ್ನು ಸ್ವಚ್ಫಗೊಳಿಸಿದ್ದಾಳೆ. ಬಳಿಕ ಎಂದಿನಂತೆ ಮಾಮೂಲಿ ದಿನಚರಿ ಆರಂಭಿಸಿದ್ದಾಳೆ. ಆದರೆ, ಕೆಲವೇ ಹೊತ್ತಲ್ಲಿ ಅವಳಿಗೆ ತಲೆತಿರುಗುವಂತೆ ಭಾಸವಾಗಿದೆ. ಹೇಳಿದರೆ ಮನೆಯವರು ಬೈಯ್ಯುತ್ತಾರೆ ಎಂಬ ಭಯದಿಂದ ಹೊಟ್ಟೆ ನೋವಿನ ಔಷಧಿ ಸೇವಿಸಿದ್ದಾಳೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕುಟುಂಬಸ್ಥರು ಅಫ್ಸಾನಾಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಒಟ್ಟು ಮೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಿರಂತರ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ತನ್ನ ತಾಯಿಗೆ ತಿಳಿಸಿದಾಗ, ಆಕೆ ಮನೆಯವರಿಗೆ ವಿಷಯ ಬಹಿರಂಗಪಡಿಸಿದ್ದಾರೆ. ಸೆಪ್ಟೆಂಬರ್ 12ರಂದು ಅಪ್ಸಾನಾಳನ್ನು ಸರ್ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅಪ್ಸಾನಾ ಕೊನೆಯುಸಿರೆಳೆದಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...