ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ತಂದೆ ಹಾಗೂ ಪುತ್ರ ಜೊತೆ ಸೇರಿ ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಈ ಪ್ರತಿಮೆಯ ವಿಶೇಷ ಅಂದರೆ ಸಂಪೂರ್ಣ ಗುಜರಿ ವಸ್ತುಗಳನ್ನೇ ಬಳಸಿ ಅತ್ಯಂತ ಮನಮೋಹಕವಾದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಪ್ರತಿಮೆಯನ್ನು ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಪೋರೇಟರ್ ಮೋಹನ್ ರಾಜು ಪ್ರತಿಷ್ಠಾಪಿಸಲಿದ್ದಾರೆ.
ಕೆ. ವೆಂಕಟೇಶ್ವರ ರಾವ್ ಹಾಗೂ ಅವರ ಪುತ್ರ ರವಿಚಂದ್ರ ಗುಂಟೂರಿನ ತೆನಾಲಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಇವರು 2 ತಿಂಗಳ ಹಿಂದಿನಿಂದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದರು.
ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ ಹಾಗೂ ಗುಂಟೂರಿನಲ್ಲಿ ಕಲೆ ಹಾಕಲಾದ ಆಟೋಮೊಬೈಲ್ ತ್ಯಾಜ್ಯಗಳನ್ನೇ ಬಳಕೆ ಮಾಡಿ ಈ ಪುತ್ಥಳಿಯನ್ನು ವೆಂಕಟೇಶ್ವರ್ ರಾವ್ ಹಾಗೂ ರವಿಚಂದ್ರ ನಿರ್ಮಾಣ ಮಾಡಿದ್ದಾರೆ.
10 ಮಂದಿ ಸದಸ್ಯರಿದ್ದ ನಮ್ಮ ತಂಡವು ಈ ಪ್ರತಿಮೆಯನ್ನು ತೆನಾಲಿಯ ಸಿಲಪಸಲಾ ಎಂಬಲ್ಲಿ ನಿರ್ಮಾಣ ಮಾಡಲು ಆರಂಭಿಸಿದೆವು. ಬೈಕ್ ಚೈನ್, ಗಿಯರ್ ವ್ಹೀಲ್ಸ್, ಕಬ್ಬಿಣದ ರಾಡ್ಗಳು, ನಟ್, ಬೋಲ್ಟು ಹೀಗೆ ಸರಿ ಸುಮಾರು 2 ಟನ್ಗಳಷ್ಟು ಆಟೋ ಮೊಬೈಲ್ ತ್ಯಾಜ್ಯಗಳನ್ನು ಬಳಕೆ ಮಾಡಿ ಈ ಪ್ರತಿಮೆ ನಿರ್ಮಾಣವಾಗಿದೆ ಎಂದು ವೆಂಕಟೇಶ್ವರ್ ರಾವ್ ಹೇಳಿದ್ರು.