alex Certify ಪ್ಲಾಸ್ಮಾ ಥೆರಪಿ ಕುರಿತಂತೆ ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಮಾ ಥೆರಪಿ ಕುರಿತಂತೆ ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ಕೋವಿಡ್​ 19 ರೋಗಿಗಳಲ್ಲಿ ಪ್ಲಾಸ್ಮಾ ಥೆರಪಿಯು ಸಾವಿನ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದ ಪ್ರಕಾರ ಪ್ಲಾಸ್ಮಾ ಥೆರಪಿಗೆ ಒಳಗಾಗುವ ರೋಗಿಗಳು ಹೆಚ್ಚು ಗಂಭೀರವಾದ ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ ಎಂದೂ ತಿಳಿದುಬಂದಿದೆ.

ಜರ್ನಲ್​ ನೇಚರ್​​ ಮೆಡಿಸಿನ್​ನಲ್ಲಿ ಪ್ರಕಟವಾದ ಅಧ್ಯಯನದ ವರದಿಯ ಪ್ರಕಾರ ಕೊರೊನಾಗೆ ಒಳಗಾದ ರೋಗಿಯ ರಕ್ತದಲ್ಲಿ ಆ್ಯಂಟಿಬಾಡಿ ಪ್ರೊಫೈಲ್​ಗಳಲ್ಲಿ ವ್ಯತ್ಯಾಸ ಕಂಡುಬರುತ್ತಿರುತ್ತದೆ. ಇದು ಚಿಕಿತ್ಸೆಗೆ ದೇಹವು ಪ್ರತಿಕ್ರಿಯಿಸುವ ರೀತಿಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಕೋವಿಡ್​ನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತವನ್ನು ಇತರೆ ಸೋಂಕಿತರಿಗೆ ನೀಡುವ ಮೂಲಕ ಅವರು ಚೇತರಿಸಿಕೊಳ್ಳಲು ನೀಡಲಾಗುತ್ತದೆ. ಇದನ್ನೇ ಪ್ಲಾಸ್ಮಾ ಥೆರಪಿ ಎಂದು ವಿಶ್ಲೇಷಿಸಬಹುದಾಗಿದೆ.

ಕೋವಿಡ್​ 19ನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದ ರಕ್ತದಲ್ಲಿ ಪ್ಲಾಸ್ಮಾ ಕಣವು ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯು ಬದುಕಲು ಸಹಾಯ ಮಾಡುತ್ತದೆ ಎಂದೇ ಇಲ್ಲಿಯವರೆಗೂ ಯೋಚಿಸಲಾಗಿತ್ತು. ಆದರೆ ದುರಾದೃಷ್ಟವಶಾತ್​ ಈ ಯೋಚನೆಯು ಸುಳ್ಳಾಗಿದೆ ಎಂದು ಅಧ್ಯಯನದ ಸಹ ಪ್ರಾಂಶುಪಾಲ ತನಿಖಾಧಿಕಾರಿ ಡೋನಾಲ್ಡ್​ ಆರ್ನೋಲ್ಡ್​ ಹೇಳಿದ್ದಾರೆ. ಇವರು ಕೆನಡಾದ ಮೆಕ್​ಮಾಸ್ಟರ್​​ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿದ್ದಾರೆ. ಕೋವಿಡ್​ 19ನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗದಂತೆ ಎಚ್ಚರಿಕೆ ನೀಡುತ್ತೇವೆ ಎಂದು ಅವರು ಹೇಳಿದ್ರು.

ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಗುಣಮುಖರಾಗುವುದಕ್ಕಿಂತ ಹೆಚ್ಚಾಗಿ ಗಂಭೀರವಾದ ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತಾರೆ ಎಂದು ಈ ಸಂಶೋಧನೆಯು ಕಂಡುಹಿಡಿದಿದೆ. ಪ್ರತಿಕೂಲ ಪರಿಣಾಮಗಳಲ್ಲಿ ಹೆಚ್ಚಾಗಿ ಆಮ್ಲಜನಕದ ಅಗತ್ಯತೆ ಹೆಚ್ಚುವುದು ಹಾಗೂ ಉಸಿರಾಟದ ತೊಂದರೆ ಉಂಟಾಗುವುದು ಸಾಮಾನ್ಯ ಅಡ್ಡಪರಿಣಾಮವಾಗಿದೆ. ಕೋವಿಡ್​ 19ನಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ನಿಯಂತ್ರಿಸುವಲ್ಲಿಯೂ ಪ್ಲಾಸ್ಮಾ ಥೆರಪಿಯು ಯಾವುದೇ ಪ್ರಮುಖ ಪಾತ್ರವನ್ನು ವಹಿಸಿಲ್ಲ ಎಂದು ಈ ಅಧ್ಯಯನ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...