ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಶೂಟರ್ ಒಬ್ಬರು ತಮ್ಮ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ನಮನ್ ವೀರ್ ಸಿಂಗ್ ಬ್ರಾರ್ ಸಾವನ್ನಪ್ಪಿರುವ ಶೂಟರ್ ಆಗಿದ್ದಾರೆ.
ಸೋಮವಾರದಂದು ಮೊಹಾಲಿಯಲ್ಲಿರುವ ಮನೆಯಲ್ಲಿ 28 ವರ್ಷದ ನಮನ್ ವೀರ್ ಸಿಂಗ್ ಅವರ ಮೃತದೇಹ ಕಂಡು ಬಂದಿದ್ದು, ಅವರ ದೇಹದಲ್ಲಿ ಗುಂಡು ತಾಗಿದ ಗಾಯ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮನ್ ವೀರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾರೆಯೇ ಎಂಬುದು ಪೊಲೀಸರ ತನಿಖೆ ಬಳಿಕ ಬಹಿರಂಗವಾಗಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಮೊಹಾಲಿಯ ಉಪ ಪೊಲೀಸ್ ಆಯುಕ್ತ ಗುರು ಶೇರ್ ಸಿಂಗ್ ತಿಳಿಸಿದ್ದಾರೆ.