ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 673 ಜನರಿಗೆ ಸೋಂಕು ತಗುಲಿದ್ದು, 1074 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
13 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 16,241 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಒಂದೇ ದಿನ 1,19,014 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 0.56 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ 214 ಜನರಿಗೆ ಸೋಂಕು ತಗುಲಿದ್ದು, 371 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. 7211 ಸಕ್ರಿಯ ಪ್ರಕರಣಗಳಿವೆ.