ಸ್ವದೇಶಿ ನಿರ್ಮಿತ ಕೋವಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈ ವಾರ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ದೇಶೀಯ ಲಸಿಕೆ ಕೋವಾಕ್ಸಿನ್ ಅನ್ನು ಹೈದರಾಬಾದ್ ಮೂಲದ ತಯಾರಕ ಕಂಪನಿ ಭಾರತ್ ಬಯೋಟೆಕ್ ತಯಾರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಅನುಮೋದನೆಯು ಭಾರತ್ ಬಯೋಟೆಕ್ ಕೋವಾಕ್ಸಿನ್ ರಫ್ತು ಮಾಡಲು ಹಾಗೂ ಈ ಲಸಿಕೆ ಪಡೆದ ಜನರ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸಲು ಅನುಮತಿಸುತ್ತದೆ.
ದೇಶದಲ್ಲಿ ನೀಡಲಾಗುತ್ತಿರುವ ಮೂರು ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ದೇಶದಲ್ಲಿ ಔಷಧ ನಿಯಂತ್ರಕವು ಮೊಡೆರ್ನಾ ಹಾಗೂ ಜಾನ್ಸನ್ ಅವರಿಗೆ ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ನೀಡಿದೆ.