alex Certify ಬುರ್ಕಾ ಸಂಪ್ರದಾಯ ವಿರೋಧಿಸಿ ಸೋಶಿಯಲ್​ ಮೀಡಿಯಾ ಅಭಿಯಾನ ಆರಂಭಿಸಿದ ಅಫ್ಘಾನ್​ ಮಹಿಳೆಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುರ್ಕಾ ಸಂಪ್ರದಾಯ ವಿರೋಧಿಸಿ ಸೋಶಿಯಲ್​ ಮೀಡಿಯಾ ಅಭಿಯಾನ ಆರಂಭಿಸಿದ ಅಫ್ಘಾನ್​ ಮಹಿಳೆಯರು..!

ತಾಲಿಬಾನ್​​​ನ ಬುರ್ಕಾ ಕಡ್ಡಾಯ ಎಂಬ ನೀತಿಯನ್ನು ವಿರೋಧಿಸುವ ಸಲುವಾಗಿ ಸಾಕಷ್ಟು ಅಫ್ಘಾನ್​ ಮಹಿಳೆಯರು ಅಫ್ಘಾನ್​ ಸಾಂಪ್ರದಾಯಿಕ ಉಡುಪನ್ನು ಧರಿಸಿ ತಮ್ಮ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ.

#AfghanistanCulture ಎಂಬ ಹೆಸರಿನಲ್ಲಿ ಈ ಅಭಿಯಾನವು ನಡೆಯುತ್ತಿದೆ. ಅಫ್ಘಾನಿಸ್ತಾನ ಹಾಗೂ ವಿದೇಶಗಳಲ್ಲಿರುವ ಮಹಿಳೆಯರು ಅಫ್ಘಾನಿಸ್ತಾನದ ಉಡುಪನ್ನು ಧರಿಸಿ ಫೋಟೋ ಶೇರ್​ ಮಾಡುತ್ತಿದ್ದಾರೆ. #AfghanistanCulture, #DoNotTouchMyClothes ಎಂಬ ಹ್ಯಾಶ್​ಟ್ಯಾಗ್​ನ ಅಡಿಯಲ್ಲಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ.

ಅಫ್ಘಾನಿಸ್ತಾನದ ಸಾಂಪ್ರದಾಯಿಕ ಉಡುಪು ಮೈ ಮುಚ್ಚುವಂತೆಯೇ ಇದೆ. ಅಲ್ಲದೇ ದುಪ್ಪಟ್ಟಾ ಹಾಗೂ ತಲೆಗೆ ಹಾಕುವು ಸ್ಕಾರ್ಫ್​ ಕೂಡ ಹೊಂದಿದೆ. ಆದರೂ ಕೂಡ ತಾಲಿಬಾನಿಗಳು ಒತ್ತಾಯಪೂರ್ವಕವಾಗಿ ಬುರ್ಕಾ ಸಂಪ್ರದಾಯವನ್ನು ಮಹಿಳೆಯರ ಮೇಲೆ ಹೇರುತ್ತಿದ್ದಾರೆ. ಇದನ್ನು ವಿರೋಧಿಸಲು ಮಹಿಳೆಯರು ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ.

ಆಗಸ್ಟ್​ 15ರಿಂದ ತಾಲಿಬಾನ್​ ಅಧೀನದಲ್ಲಿ ಅಫ್ಘಾನಿಸ್ತಾನ ಬಂದಾಗಿನಿಂದ ಮಹಿಳೆಯರಿಗೆ ನರಕಯಾತನೆಯೇ ಶುರುವಾಗಿದೆ. ಮಹಿಳೆಯರು ಬುರ್ಕಾ ಧರಿಸಲೇಬೇಕು, ತರಗತಿಗಳಲ್ಲಿ ಪುರುಷರ ಜೊತೆ ಕೂರಬಾರದು, ಮಹಿಳೆಯರು ಮಂತ್ರಿಗಳಾಗಬಾರದು ಹೀಗೆ ನಾನಾ ನಿರ್ಬಂಧಗಳನ್ನು ಮಹಿಳೆಯರ ಮೇಲೆ ತಾಲಿಬಾನ್ ಒತ್ತಾಯಪೂರ್ವಕವಾಗಿ ಹೇರುತ್ತಿದೆ.

https://twitter.com/sibghat51539988/status/1437063220385263623

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...