alex Certify ದ್ವಿಚಕ್ರ ವಾಹನ ಖರೀದಿಸುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಈ ಕಂಪನಿ ನೀಡ್ತಿದೆ ಶೇ.100 ರಷ್ಟು ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಚಕ್ರ ವಾಹನ ಖರೀದಿಸುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಈ ಕಂಪನಿ ನೀಡ್ತಿದೆ ಶೇ.100 ರಷ್ಟು ಸಾಲ

ದ್ವಿಚಕ್ರ ವಾಹನಗಳೇ ಸದ್ಯ ನಗರ ಪ್ರದೇಶಗಳಲ್ಲಿನ ವೇಗದ ದಿನಚರಿಗೆ ಪೂರಕವಾದ ಸಂಚಾರ ಮಾಧ್ಯಮಗಳಾಗಿವೆ. ಸಾಮಾನ್ಯ ಜನರು ನಿತ್ಯದ ಸಂಚಾರಕ್ಕೆ ಹೆಚ್ಚಾಗಿ ಅವಲಂಬಿಸುತ್ತಿರುವುದು ಇವುಗಳನ್ನೇ.

ಆದರೆ ಕೊರೊನಾ ದಾಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಲವರ ದ್ವಿಚಕ್ರ ವಾಹನದ ಕನಸು ಈಡೇರಿಲ್ಲ.

ಇದಕ್ಕೆ ನೆರವಾಗಲು ಶ್ರೀರಾಮ್‌ ಸಿಟಿ ಯೂನಿಯನ್‌ ಫೈನಾನ್ಸ್‌ ಲಿಮಿಟೆಡ್‌ ನಿರ್ಧರಿಸಿದೆ. ಸೆ.7 ರಂದು ಅವರು ಘೋಷಿಸಿರುವ ಹೊಸ ಸಾಲ ಯೋಜನೆ ’ ಎಕ್ಸ್‌ಪ್ರೆಸ್‌ ಟೂ ವ್ಹೀಲರ್‌ ಲೋನ್‌’ ಭಾರಿ ಜನಪ್ರಿಯವಾಗುತ್ತಿದೆ. ಯಾವುದೇ ದ್ವಿಚಕ್ರ ವಾಹನವು ರಸ್ತೆಗಿಳಿಯಲು ಪಾವತಿಸಬೇಕಿರುವ ಪೂರ್ಣ ಮೊತ್ತವನ್ನು ಸಾಲದ ರೂಪದಲ್ಲಿ ಕೆಲವೇ ನಿಮಿಷಗಳಲ್ಲಿ ಮಂಜೂರು ಮಾಡಲಾಗುತ್ತದೆ.

BIG NEWS: ಬೆಲೆ ಏರಿಕೆ ವಿರುದ್ಧ ‘ಕೈ’ ನಾಯಕರಿಂದ ಎತ್ತಿನ ಗಾಡಿ ಚಲೋ; ಎತ್ತಿನ ಗಾಡಿಯಲ್ಲಿ ಅಧಿವೇಶಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು

ಈ ಯೋಜನೆ ಸಂಪೂರ್ಣ ಡಿಜಿಟಲ್‌ ಆಗಿದೆ. ಯಾವುದೇ ಬ್ರ್ಯಾಂಚ್‌ ಕಚೇರಿಗಳಿಗೆ ಅಲೆದಾಡುವ ಗೋಜಿಲ್ಲ. ಜನರ ಸಮಯ ಉಳಿತಾಯ ಮಾಡಲೆಂದೇ ಈ ಯೋಜನೆ ರೂಪಿಸಿದ್ದೇವೆ ಎಂದು ಕಂಪನಿಯ ಸಿಇಒ ವೈ.ಎಸ್‌. ಚಕ್ರವರ್ತಿ ಹೇಳಿದ್ದಾರೆ. ಸಾಲ ಪಡೆಯಲು ಸದ್ಯದ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಮತ್ತು ಮೂಲಭೂತ ಗುರುತಿನ ದಾಖಲೆಗಳಿದ್ದರೆ ಸಾಕು. ಐಷಾರಾಮಿ ಅಥವಾ ದುಬಾರಿ ದ್ವಿಚಕ್ರ ವಾಹನಗಳ ಖರೀದಿಗೂ ಕೂಡ ಈ ಸಾಲ ಯೋಜನೆ ಬಹಳ ಸಹಾಯಕವಾಗಿದೆ ಎಂದು ಸಾಲ ಪಡೆದ ಹಲವು ಗ್ರಾಹಕರು ಅನುಭವ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...