alex Certify BIG NEWS: ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆ ಇರುವವರ ಆಸ್ತಿ ವಿವರ ಶೀಘ್ರದಲ್ಲೇ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆ ಇರುವವರ ಆಸ್ತಿ ವಿವರ ಶೀಘ್ರದಲ್ಲೇ ಬಯಲು

ಆಟೋಮ್ಯಾಟಿಕ್‌ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಆಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯು ಇದೇ ತಿಂಗಳು ಸರಕಾರದ ಕೈಗೆ ಸಿಗಲಿದೆ. ಇದನ್ನು ಶೀಘ್ರವೇ ಸಾರ್ವಜನಿಕವಾಗಿ ಕೂಡ ತಿಳಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಪ್ಪುಹಣದ ವಿರುದ್ಧ ಹೋರಾಟದ ಭಾಗವಾಗಿ ಸ್ವಿಸ್‌ ಬ್ಯಾಂಕ್‌ ಖಾತೆದಾರರ ಮಾಹಿತಿಯು ಹೊರಬರುತ್ತಿರುವುದು ಇದೇ ಮೂರನೇ ಬಾರಿಯಾಗಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಭಾರತೀಯ ಪ್ರಜೆಗಳು ಹೊಂದಿರುವ ಫ್ಲ್ಯಾಟ್‌, ಅಪಾರ್ಟ್‌ಮೆಂಟ್‌ ಮತ್ತು ಬಂಗಲೆಗಳ ವಿವರಗಳು ಕೂಡ ಸ್ವಿಸ್‌ ಬ್ಯಾಂಕ್‌ ಮೂಲಕ ಈ ತಿಂಗಳು ಕೇಂದ್ರ ಸರ್ಕಾರದ ಕೈಗೆ ಸೇರಲಿದೆ. ಈ ಮೂಲಕ ‘ಕಾಳಧನಿಕರ ಸ್ವರ್ಗ’ ಎಂಬ ಕುಖ್ಯಾತಿಯಿಂದ ಹೊರಬರಲು ಸ್ವಿಜರ್‌ಲ್ಯಾಂಡ್‌ ನಡೆಸುತ್ತಿರುವ ಯತ್ನಕ್ಕೆ ಭಾಗಶಃ ಸಫಲತೆ ಕೂಡ ಸಿಕ್ಕಂತಾಗಲಿದೆ.

ಔಷಧ-ಫಿಟ್‌ನೆಸ್‌ ಉತ್ಪನ್ನ ಪೂರೈಕೆ ಬಂದ್‌ ಮಾಡಿದ ’ಜೊಮ್ಯಾಟೊ’

ಈ ಬಾರಿಯ ಮಾಹಿತಿ ಪಟ್ಟಿಯಲ್ಲಿ ಭಾರತೀಯ ಪ್ರಜೆಗಳು ಸ್ವಿಸ್‌ ಬ್ಯಾಂಕ್‌ಗೆ ನೀಡಿರುವ ರಿಯಲ್‌ ಎಸ್ಟೇಟ್‌ ಮಾಹಿತಿ ಹೊರಬರುತ್ತಿದೆ. ಇನ್ನೂ ಕೂಡ ಎನ್‌ಜಿಒಗಳ ಹೆಸರಲ್ಲಿ ನೀಡಿರುವ ದೇಣಿಗೆ, ಎನ್‌ಜಿಒ-ಟ್ರಸ್ಟ್‌ಗಳ ರೂಪದಲ್ಲಿ ಮಾಡಲಾಗಿರುವ ಹೂಡಿಕೆಗಳು, ಡಿಜಿಟಲ್‌ ಕರೆನ್ಸಿ ಹೂಡಿಕೆಗಳು ಮತ್ತು ವ್ಯವಹಾರಕ್ಕೆ ಸಂಬಂಧಿತ ಗೌಪ್ಯ ಮಾಹಿತಿಗಳು ಬಯಲಾಗುವುದು ಬಾಕಿ ಉಳಿದಿದೆ.

2019ರ ಸೆಪ್ಟೆಂಬರ್‌ನಲ್ಲಿ ಒಪ್ಪಂದದ ಪ್ರಕಾರ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಖಾತೆಗಳಲ್ಲಿನ ಹಣದ ಮಾಹಿತಿಯು ಭಾರತ ಸರ್ಕಾರಕ್ಕೆ ಮೊದಲ ಬಾರಿಗೆ ನೀಡಲಾಗಿತ್ತು. ಹಣದ ವಹಿವಾಟು ಪಾರದರ್ಶಕವಾಗಿರಲಿ ಎಂಬ ಉದ್ದೇಶದಿಂದ ಸ್ವಿಜರ್‌ಲ್ಯಾಂಡ್‌ ಮತ್ತು ಭಾರತದ ನಡುವೆ ಈ ಮಹತ್ತರ ಒಪ್ಪಂದವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...