ಮುಂಬೈ: ಸಾಫ್ಟ್ವೇರ್ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಟಿಸಿಎಸ್ ಬಹುದೊಡ್ಡ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿಗಳ ನೇಮಕಾತಿ ಮುಂದಾಗಿದ್ದು, ರೀಬಿಗಿನ್ ಅಭಿಯಾನ ಕೈಗೊಂಡಿದೆ.
ಅನೇಕ ವರ್ಷಗಳ ಕಾಲ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಮಹಿಳೆಯರು ಕೌಟುಂಬಿಕ ನಿರ್ವಹಣೆ ಮೊದಲಾದ ಕಾರಣಗಳಿಂದ ವೃತ್ತಿ ತೊರೆದಿದ್ದಾರೆ. ಇಂತಹ ಮಹಿಳೆಯರಿಗೆ ಮತ್ತೆ ಕೆಲಸಕ್ಕೆ ಮರಳಲು ಅಭಿಯಾನ ಕೈಗೊಳ್ಳಲಾಗಿದೆ.
ವೃತ್ತಿಪರ ಮಹಿಳೆಯರಿಗಾಗಿ ಕೈಗೊಂಡ ಅಭಿಯಾನ ಇದಾಗಿದ್ದು, ಕನಿಷ್ಠ ಎರಡು ವರ್ಷ ಅನುಭವ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಟಿಸಿಎಸ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಗಣಪತಿ ಸುಬ್ರಮಣ್ಯಂ ಮಾಹಿತಿ ನೀಡಿದ್ದಾರೆ. ಕಳೆದ ಅವಧಿಯಲ್ಲಿ 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರೊಂದಿಗೆ ಟಿಸಿಎಸ್ ಒಟ್ಟು ಉದ್ಯೋಗಿಗಳ ಸಂಖ್ಯೆ 5 ಲಕ್ಷ ದಾಟಿದ್ದು, ಮುಂದಿನ ವರ್ಷ 40 ಸಾವಿರ ಉದ್ಯೋಗಿಗಳ ನೇಮಕ ಮಾಡಿಕೊಳ್ಳುವುದಾಗಿ ಟಿಸಿಎಸ್ ಹೇಳಿದೆ.
ಮಹಿಳಾ ಉದ್ಯೋಗಿಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಟಿಸಿಎಸ್ ಕೆರಿಯರ್ ಪೋರ್ಟಲ್ ನಲ್ಲಿ ಅಪ್ಲೈ ಮೇಲೆ ಕ್ಲಿಕ್ ಮಾಡಿ ತಮ್ಮ ಪ್ರೊಫೈಲ್ ರಚಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.