ಮೈಸೂರು: ನಂಜನಗೂಡಿನ ಹುಚ್ಚಗಣಿಯಲ್ಲಿನ ಮಹದೇವಮ್ಮ ದೇಗುಲ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಹರ್ಷವರ್ಧನ್, ಸುಪ್ರೀಂ ಕೋರ್ಟ್ ಆದೇಶ ಜನಪ್ರತಿನಿಧಿಗಳನ್ನೂ ಅಸಹಾಯಕರನ್ನಾಗಿಸಿದೆ ಎಂದು ಹೇಳಿದ್ದಾರೆ.
ದೇವಾಲಯ ತೆರವಿಗೆಂದು ಅಧಿಕಾರಿಗಳು ಜೆಸಿಬಿ ತಂದಾಗ ನಾನು ಹೋಗಿ ತಲೆಕೊಡಬೇಕಿತ್ತಾ? ಈ ವಿಚಾರದಲ್ಲಿ ನಾನು ಅಸಹಾಯಕನಾಗಿದ್ದೇನೆ. ಕೋರ್ಟ್ ಆದೇಶ ನಮ್ಮಂತ ಜನಪ್ರತಿನಿಧಿಗಳನ್ನೂ ಕಟ್ಟಿಹಾಕಿದೆ ಎಂದಿದ್ದಾರೆ.
BIG BREAKING: ಚಿಂತಾಮಣಿ ಬಳಿ ಭೀಕರ ಅಪಘಾತ, 6 ಜನ ಸಾವು; ಜೀಪ್ –ಕ್ಯಾಂಟರ್ ಡಿಕ್ಕಿಯಾಗಿ ದುರಂತ
ದೇವಾಲಯ ತೆರವಿಗೂ ಮುನ್ನ ಗ್ರಾಮಸ್ಥರ ಅಭಿಪ್ರಾಯ ಕೇಳಿ, ಅವರ ಮನವೊಲಿಸಿ ಎಂದು ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಬೇಕಿತ್ತು. ಹುಣಸೂರು, ಪಿರಿಯಾಪಟ್ಟಣಗಳಲ್ಲೂ ದೇವಾಲಯಗಳನ್ನು ತೆರವುಗೊಳಿಸಲಾಗಿದೆ. ಆದರೆ ಸಂಸದ ಪ್ರತಾಪ್ ಸಿಂಹ ನನ್ನ ಕ್ಷೇತ್ರದ ವಿಡಿಯೋ ಮಾತ್ರ ಏಕೆ ಅಪ್ ಲೋಡ್ ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.