ಕೊರೊನಾ ಸಂಕಷ್ಟದಲ್ಲಿ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಅನೇಕ ಹಿರಿಯ ನಾಗರಿಕರು ಬಳಲುತ್ತಿದ್ದಾರೆ. ಅಂಥವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ (ಭಾರತೀಯ ಅಂಚೆ ಇಲಾಖೆ)ನವರು 60 ವರ್ಷದ ಮೇಲ್ಪಟ್ಟ ನಾಗರಿಕರಿಗೆ ನೆರವಾಗುವ ಕೊಡುಗೆಯೊಂದನ್ನು ಕೊಟ್ಟಿದ್ದಾರೆ.
ಪಿಪಿಎಫ್ ಸೇರಿದಂತೆ ತಮ್ಮ ಹೂಡಿಕೆಯ ಇತರ ಖಾತೆಗಳಿಂದ ಹಣ ತೆಗೆಯಲು ಹಿರಿಯರು ಇನ್ಮುಂದೆ ಖುದ್ದಾಗಿ ಅಂಚೆ ಕಚೇರಿಗೆ ಭೇಟಿ ನೀಡಬೇಕಿಲ್ಲ. ಅಧಿಕೃತ ವಾರಸುದಾರರು ಅಥವಾ ಚಿರಪರಿಚಿತರನ್ನು ಅಂಚೆ ಕಚೇರಿಗೆ ಕಳುಹಿಸಿಕೊಟ್ಟರೆ ಸಾಕಾಗಿದೆ.
ಸಾಲದ ಖಾತೆ ಮುಚ್ಚಲು ಕೂಡ ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಪಿಪಿಎಫ್ ಅಥವಾ ಇತರ ಹೂಡಿಕೆಗಳ ಮೊತ್ತವನ್ನು ಹಿರಿಯ ನಾಗರಿಕರ ಹೆಸರಿನಲ್ಲಿ ಚೆಕ್ ಮೂಲಕ ಅಥವಾ ಅವರ ಉಳಿತಾಯ ಖಾತೆಗೆ ಜಮೆ ಮಾಡಲಾಗುವುದು.
ಇದಕ್ಕಾಗಿ ಕೆಳಗಿನಂತೆ ಮಾಡಿರಿ……
1. ಎಸ್‌ಬಿ-12 ಫಾರ್ಮ್‌ಗೆ ಅಧಿಕೃತ ಸಹಿಯನ್ನು ಹಿರಿಯ ನಾಗರಿಕರು ಮಾಡಬೇಕು. ನಾಮಿನಿ ಅಥವಾ ವಾರಸುದಾರರಿದ್ದರೆ ಫಾರ್ಮ್‌ಗೆ ಅವರ ಸಹಿ ಅಗತ್ಯ.
2. ಖಾತೆ ಮುಚ್ಚಲು ಎಸ್‌ಬಿ-7 ಅಥವಾ ಎಸ್‌ಬಿ-7ಬಿ ಫಾರ್ಮ್‌ಗೆ ಸಹಿ ಕಡ್ಡಾಯ.
3. ಹಿರಿಯ ನಾಗರಿಕರ ಪರವಾಗಿ ಅಂಚೆ ಕಚೇರಿಗೆ ಭೇಟಿ ನೀಡುವ ವ್ಯಕ್ತಿಯು ತನ್ನ ಗುರುತಿನ ದಾಖಲೆ/ಐಡಿಯ ಸೆಲ್ಫ್-ಅಟೆಸ್ಟ್ ಪ್ರತಿಯನ್ನು ತರಲೇಬೇಕು. ಜತೆಗೆ ಖಾತೆದಾರರ ವಿಳಾಸದ ಆಧಾರಕ್ಕೆ ದಾಖಲೆಯ ಪ್ರತಿಯನ್ನು ಕೂಡ ಹೊಂದಿರಬೇಕು.
4. ಪಾಸ್‌ಬುಕ್ ಕಡ್ಡಾಯವಾಗಿ ನೀಡಿ, ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ.