alex Certify ಬ್ರಾದಲ್ಲೇ ಹಲ್ಲಿ ಇದ್ರೂ ಗೊತ್ತಾಗಲಿಲ್ಲ…! 4000 ಮೈಲಿ ದೂರದ ಜರ್ನಿ ನಂತ್ರ ಕಾಣ್ತು ಮಹಿಳೆಯ ಬ್ರಾದಲ್ಲಿ ಅಡಗಿದ್ದ ಹಲ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾದಲ್ಲೇ ಹಲ್ಲಿ ಇದ್ರೂ ಗೊತ್ತಾಗಲಿಲ್ಲ…! 4000 ಮೈಲಿ ದೂರದ ಜರ್ನಿ ನಂತ್ರ ಕಾಣ್ತು ಮಹಿಳೆಯ ಬ್ರಾದಲ್ಲಿ ಅಡಗಿದ್ದ ಹಲ್ಲಿ

ವಿಲಕ್ಷಣ ಘಟನೆಯೊಂದರಲ್ಲಿ ಒಂದು ಸಣ್ಣ ಹಲ್ಲಿ ಬಾರ್ಬಡೋಸ್‌ನಿಂದ ಇಂಗ್ಲೆಂಡ್‌ನ ಯಾರ್ಕ್‌ಷೈರ್‌ಗೆ 4,000 ಮೈಲಿಗಳ ದೂರ ಕ್ರಮಿಸಲು ಸಾಧ್ಯವಾಗಿದೆ. ಅದು ಕೂಡ ಮಹಿಳೆಯ ಬ್ರಾದಲ್ಲಿ ಅಡಗಿಕೊಂಡು ಅದು ಪ್ರಯಾಣಿಸಿರುವುದು ವಿಶೇಷವಾಗಿದೆ.

ಲಿಸಾ ರಸ್ಸೆಲ್(47) ದಕ್ಷಿಣ ಯಾರ್ಕ್‌ಷೈರ್‌ನ ರೋಥರ್‌ಹ್ಯಾಮ್ ಬಳಿಯ ತನ್ನ ಮನೆಗೆ ಮರಳಿದ ನಂತರವೇ ಗೆಕ್ಕೊ(ಸಣ್ಣಹಲ್ಲಿ)ಯನ್ನು ಕಂಡಿದ್ದಾಳೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. ಅವಳು ತನ್ನ ಸೂಟ್‌ಕೇಸ್ ತೆರೆದು ತನ್ನ ವಸ್ತುಗಳನ್ನು ಪರೀಕ್ಷಿಸಿದ ವೇಳೆ ಬ್ರಾದಲ್ಲಿ ಹಲ್ಲಿ ಗಮನಿಸಿದ್ದಾಳೆ. ಹೀಗಿದ್ದರೂ ಆಕೆಗೆ ತನ್ನೊಂದಿಗೆ ಹಲ್ಲಿಯೂ ಬಂದಿದೆ ಎಂಬುದನ್ನು ಅರಿತುಕೊಳ್ಳಲು ಸ್ವಲ್ಪ ಸಮಯ ಹಿಡಿದಿದೆ. ಆಕೆ ತನ್ನ ಬ್ರಾದಲ್ಲಿ ತಣ್ಣಗೆ ಮಲಗಿದ್ದ ಹೆಣ್ಣು ಹಲ್ಲಿಯನ್ನು ಮೊದಲು ಸ್ಪೆಕ್ ಎಂದು ತಪ್ಪಾಗಿ ಭಾವಿಸಿದ್ದಳು.

ಹಲ್ಲಿಗಳ ವಿಶಾಲ ವರ್ಗಕ್ಕೆ ಗೆಕ್ಕೊ ಸಣ್ಣ ಹಲ್ಲಿಗಳು ಸೇರಿವೆ. ವಾಸ್ತವವಾಗಿ ಸರಿಸುಮಾರು 1,500 ಪ್ರತ್ಯೇಕ ಗೆಕ್ಕೊ ಜಾತಿಗಳಿವೆ ಎಂದು ಲೈವ್ ಸೈನ್ಸ್ ಹೇಳಿದೆ. ಇವುಗಳ ಜಾತಿಗಳನ್ನು ಅವಲಂಬಿಸಿ ಗೆಕ್ಕೊಗಳು ಗಾತ್ರದಲ್ಲಿ ಬದಲಾಗಬಹುದು, 0.6 ಇಂಚು ಉದ್ದದಿಂದ ಸುಮಾರು 14 ರಿಂದ 17 ಇಂಚುಗಳವರೆಗೆ ಬದಲಾಗುತ್ತವೆ ಎನ್ನಲಾಗಿದೆ.

ಅವು ಎಲ್ಲ ಕಡೆ ಹೊಂದಿಕೊಳ್ಳಬಲ್ಲ ಜೀವಿಗಳಾಗಿವೆ. ಅಂಟಾರ್ಕ್ಟಿಕಾ ಮತ್ತು ಮಳೆ ಕಾಡುಗಳಿಂದ ಹಿಡಿದು ಮರುಭೂಮಿಗಳವರೆಗೆ ವ್ಯಾಪಕವಾದ ಆವಾಸಸ್ಥಾನಗಳಲ್ಲಿಯೂ ಅವು ಕಂಡುಬರುತ್ತವೆ.

 

ಲಿಸಾ ರಸೆಲ್ ಬಿಬಿಸಿ ನ್ಯೂಸ್‌ಗೆ ಹೇಳಿದಂತೆ, ಗೆಕ್ಕೊ ತನ್ನ ಒಳ ಉಡುಪಿನಲ್ಲಿ ಅಡಗಿರುವುದನ್ನು ಮೊದಲು ನೋಡಿದಾಗ ಅವಳು ಆಘಾತಕ್ಕೊಳಗಾಗಿದ್ದಾಳೆ. ಅದು ಚಲಿಸಿದಾಗ, ಕಿರುಚಲು ಆರಂಭಿಸಿದೆ. 4,000 ಮೈಲಿ ಪ್ರಯಾಣದ ನಂತರ ಬ್ರಾದಲ್ಲಿ ಇಂತಹ ಜೀವಿ ಕಂಡು ಬರುವ ನಿರೀಕ್ಷೆ ಇರಲಿಲ್ಲ ಎಂದು ಆಕೆ ಹೇಳಿದ್ದಾಳೆ.

ಮುಚ್ಚುವ ಸಲುವಾಗಿ ಸೂಟ್‌ ಕೇಸ್‌ ಮೇಲೆ ಕುಳಿತಿದ್ದರೂ ಸರೀಸೃಪಕ್ಕೆ ಯಾವುದೇ ಹಾನಿಯಾಗಿಲ್ಲ. ನಂತರ 24 ಗಂಟೆಗಳ ಕಾಲ ರಸೆಲ್ ಸೂಟ್‌ಕೇಸ್‌ನ ಇಕ್ಕಟ್ಟಾದ ಒಳಭಾಗದಲ್ಲೇ ಇದೆ. ಬ್ರಾದೊಳಗೆ ಸೇರಿಕೊಂಡಿದ್ದ ಸಣ್ಣ ಹಲ್ಲಿ ಅದೃಷ್ಟಶಾಲಿಯಾಗಿತ್ತು. ಅದು ಇದ್ದ ಬ್ರಾ ಧರಿಸಲು ನಾನು ಮುಂದಾಗಲಿಲ್ಲ  ಎಂದು ಲಿಸಾ ರಸೆಲ್ ಹೇಳಿಕೊಂಡಿದ್ದಾಳೆ.

ಸಣ್ಣ ಹಲ್ಲಿಯ ಚಿತ್ರಗಳನ್ನು ಹಂಚಿಕೊಂಡಿದ್ದು, ಯುಕೆ ಮೂಲದ ಪ್ರಾಣಿ ಕಲ್ಯಾಣ ಸಂಸ್ಥೆಯಾಗಿರುವ ರಾಯಲ್ ಸೊಸೈಟಿ ಫಾರ್ ದ ಪ್ರಿವೆನ್ಷನ್ ಆಫ್ ಕ್ರೂಲ್ಟಿ ಟು ಅನಿಮಲ್ಸ್ (ಆರ್‌ಎಸ್‌ಪಿಸಿಎ) ಇನ್ಸ್‌ ಪೆಕ್ಟರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

ಪ್ರಯಾಣದಿಂದ ಯಾವುದೇ ಹಾನಿಯಾಗದಂತೆ ಕಾಣಿಸಿಕೊಂಡ ಹಲ್ಲಿಯನ್ನು ನಂತರ ಉರಗ ತಜ್ಞರ ಬಳಿ ತೆಗೆದುಕೊಂಡು ಹೋಗಲಾಗಿದೆ. ಆರ್‌ಎಸ್‌ಪಿಸಿಎ ಪ್ರತಿನಿಧಿ ಸಾಂಡ್ರಾ ಡ್ರಾನ್ಸ್‌ಫೀಲ್ಡ್ ಯುಪಿಐಗೆ ಹೇಳಿದಂತೆ, ಲಿಸಾ ಈ ವಿಷಯದ ಬಗ್ಗೆ ಆರಾಮಾಗಿದ್ದಾಳೆ. ಗೆಕ್ಕೊ ತನ್ನ ಬ್ರಾದಲ್ಲಿ ಟ್ರಾನ್ಸ್‌ ಅಟ್ಲಾಂಟಿಕ್ ಕ್ರಾಸಿಂಗ್ ಅನ್ನು ಸುರಕ್ಷಿತವಾಗಿ ಮಾಡಿರುವುದು ತಮಾಷೆಯೆಂದು ಭಾವಿಸಿದ್ದಾಳೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...