ಟಿಂಡರ್ನಲ್ಲಿ ತನ್ನ ಗರ್ಲ್ಫ್ರೆಂಡ್ ಹೆಸರಿನಲ್ಲಿ ಪ್ರೊಫೈಲ್ ಸೃಷ್ಟಿ ಮಾಡಿದ್ದ ವ್ಯಕ್ತಿಯೊಬ್ಬರಿಗೆ ತಲೆ ಕೆಟ್ಟುಹೋಗುವ ಅನುಭವ ಆಗಿದೆ.
ತನ್ನ ಗರ್ಲ್ಫ್ರೆಂಡ್ ಚಿತ್ರಗಳನ್ನು ಬಳಸಿಕೊಂಡು ಪ್ರೊಫೈಲ್ ಸೃಷ್ಟಿ ಮಾಡಿದ್ದ ಈತ ತನ್ನ ಚಿತ್ರಕ್ಕೆ ಗಂಟೆಯೊಳಗೆ 1,300+ ಲೈಕ್ಸ್ ಸಿಗುತ್ತಲೇ ಭಾರೀ ಪರಿತಪಿಸುವಂತೆ ಆಗಿದೆ.
“ಗಮನವಿರಲಿ ಪುರುಷರೇ, ನಿಮ್ಮ ಗರ್ಲ್ ಫ್ರೆಂಡ್ಗಿಂತ ಉತ್ತಮವಾಗಿ ಕಾಣಬಲ್ಲಿರಿ ಎಂದು ನಿಮಗೆ ಅನಿಸಿದರೆ, ಆಕೆಯ ಚಿತ್ರಗಳನ್ನು ಬಳಸಿಕೊಂಡು ಟಿಂಡರ್ ಪ್ರೊಫೈಲ್ ಸೃಷ್ಟಿಸಿ ಅದೆಷ್ಟು ಪುರುಷರು ಹಿಂದೆ ಬೀಳುತ್ತಾರೆ ಎಂದು ಗಮನಿಸಿ….. ನಾನು ಒಂದು ಜೋಕ್ ಆಗಿ ಇದನ್ನು ಮಾಡಿದ್ದು, ನನ್ನ ಗರ್ಲ್ಫ್ರೆಂಡ್ಗೆ ಒಂದು ಗಂಟೆಯೊಳಗೆ 1300+ ಲೈಕ್ಸ್ ಸಿಕ್ಕಿವೆ” ಎಂದು ಫೇಸ್ಬುಕ್ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾನೆ ಈ ನತದೃಷ್ಟ ಬಾಯ್ಫ್ರೆಂಡ್.
ಮರದಲ್ಲಿ ಹನುಮಾನ್ ಚಾಲೀಸಾ ಕೆತ್ತಿದ ಕಲಾವಿದ….!
ಬರುಬರುತ್ತಾ ಲೈಕ್ಸ್ಗಳ ಸಂಖ್ಯೆ 2250 ದಾಟುತ್ತಲೇ, “ನನಗೆ ಇಷ್ಟೆಲ್ಲಾ ಪುರುಷರ ನಡುವೆ ಆಕೆಯನ್ನು ಪಡೆಯಲು ಫೈಟ್ ಮಾಡುವುದು ಬಲು ಕಷ್ಟ” ಎಂದು ಹೇಳಿಕೊಂಡಿದ್ದಾನೆ ಈತ.