ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ದದೇವ್ ಭಟ್ಟಾಚಾರ್ಜಿ ಅವರ ಅತ್ತಿಗೆ ಇರಾ ಬಸು ಉತ್ತರ ಕೋಲ್ಕತ್ತಾದಲ್ಲಿ ಬೀದಿಬದಿಯಲ್ಲಿ ವಾಸಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
70 ವರ್ಷದ ಇರಾರನ್ನು ಬರಾಕ್ಪುರ ಪೊಲೀಸರು ಹುಚ್ಚಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇರಾ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಲು ಬಂದ ವೇಳೆ ಹಳೆಯ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕಿ ಈ ದುಸ್ಥಿತಿಯಲ್ಲಿ ಇರುವ ವಿಚಾರ ತಿಳಿದಿದೆ. 70 ವರ್ಷದ ಇರಾ ಫುಟ್ಪಾತ್ನಲ್ಲಿ ವಾಸಿಸುತ್ತಿದ್ದಾರೆ. ಹಾಗಂತ ಇವರು ಭಿಕ್ಷಾಟನೆ ಮಾಡುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇರಾ 2009ರಲ್ಲಿ ಇರಾ ಅವರು ಖರ್ದಾ ಪ್ರಿಯನಾಥ್ ಹೆಣ್ಣು ಮಕ್ಕಳ ಪ್ರೌಢಶಾಲೆಯಿಂದ ನಿವೃತ್ತಿ ಹೊಂದಿದ್ದರು. ಶಿಕ್ಷಕಿಯಾಗಿ ಇರಾ 30 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಪಿಂಚಣಿ ಪಡೆಯಲು ಯೋಗ್ಯರಿದ್ದರೂ ಸಹ ಇರಾ ಯಾವುದೇ ದಾಖಲೆಗಳನ್ನು ಸರ್ಕಾರಕ್ಕೆ ನೀಡಿರಲಿಲ್ಲ. ಇರಾ ಒಬ್ಬ ಪ್ರಾಮಾಣಿಕ ಶಿಕ್ಷಕಿಯಾಗಿದ್ದರು. ಕಳೆದ 2 ವರ್ಷಗಳಲ್ಲಿ ಅವರು ಬರಿಗಾಲಿನಲ್ಲಿಯೇ ಶಾಲೆ ಸಮೀಪ ಬಂದಿದ್ದರು ಹಾಗೂ ಅವರು ಕೊಳಕು ಬಟ್ಟೆಗಳನ್ನು ಧರಿಸಿದ್ದರು ಎಂದು ಶಿಕ್ಷಕರು ಹೇಳಿದ್ದಾರೆ.
ನಿವೃತ್ತಿಯ ಬಳಿಕ, ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ತಮ್ಮ ಮನೆಯಲ್ಲಿಯೇ ಇರಾಗೆ ವಾಸಿಸಲು ಅವಕಾಶ ನೀಡಿದ್ದರು. ಮುಖ್ಯೋಪಾಧ್ಯಾಯಿನಿ ನಿಧನದ ಬಳಿಕ ಆ ಮನೆಯನ್ನು ತ್ಯಜಿಸಿದ ಇರಾ ಫುಟ್ಪಾತ್ನಲ್ಲಿ ವಾಸಿಸಲು ಆರಂಭಿಸಿದ್ರು. ಮುಖ್ಯೋಪಾಧ್ಯಾಯಿನಿಯ ಸಹಾಯದಿಂದ ಪಡೆದ ಭವಿಷ್ಯ ನಿಧಿಯ ಹಣದಿಂದಲೇ ಇರಾ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾರಲ್ಲೂ ಒಂದು ರೂಪಾಯಿಯನ್ನೂ ಬೇಡದ ಇರಾ ತಮ್ಮ ಸ್ವಂತ ಖರ್ಚಿನಿಂದಲೇ ಜೀವನ ಸಾಗಿಸುತ್ತಿದ್ದಾರೆ.
ಶಾಲೆಯ ಪ್ರಸ್ತುತ ಮುಖ್ಯೋಪಾಧ್ಯಾಯಿನಿ ಆಗಿರುವ ಕೃಷ್ಣಾ ಚಂದ್ರ, ಪಿಂಚಣಿ ಪಡೆಯುವ ಎಲ್ಲಾ ಆಯ್ಕೆ ಇರಾಗೆ ಇದ್ದರೂ ಅವರು ಅರ್ಜಿ ಸಲ್ಲಿಸಿರಲಿಲ್ಲ. ಇರಾಗೆ ಪಿಂಚಣಿಯನ್ನು ಪಡೆಯಲು ಬೇಕಾದ ದಾಖಲೆಗಳನ್ನು ಒದಗಿಸುವಂತೆ ಮುಖ್ಯ ಶಿಕ್ಷಕಿಗೆ ಬರಾಕ್ಪುರ ಶಿಕ್ಷಣಾಧಿಕಾರಿ ಸೂಚನೆ ನೀಡಿದ್ದಾರೆ.
ಈ ವಿಚಾರವಾಗಿ ಮಾಜಿ ಸಿಎಂ ಭಟ್ಟಚಟರ್ಜಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಮ್ಯೂನಿಸ್ಟ್ ಪಾರ್ಟಿ ಇಂಡಿಯಾದ ನಾಯಕ ಮನಾಷ್ ಮುಖರ್ಜಿ ಈ ವಿಚಾರವಾಗಿ ಮಾತನಾಡಿದ್ದು ತಾವು ಇರಾರನ್ನು ಬಹಳ ವರ್ಷಗಳಿಂದ ನೋಡಿದ್ದೇನೆ. ನಾನು ಅವರಿಗೆ ಸಹಾಯ ಮಾಡಲು ಮುಂದಾಗಿದ್ದರೂ ಸಹ ಅವರು ಯಾವುದೇ ಸಹಾಯ ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಿದ್ರು.
ಈ ಹಿಂದೆ ಕೂಡ ನಾನು ಅವರನ್ನು ಹುಚ್ಚಾಸ್ಪತ್ರೆಗೆ ದಾಖಲು ಮಾಡಿದ್ದೆ. ಆದರೆ ಅವರು ಕೆಲವೇ ದಿನಗಳಲ್ಲಿ ಅಲ್ಲಿಂದ ನಾಪತ್ತೆಯಾಗಿದ್ದರು ಎಂದು ಸಿಪಿಐ(ಎಂ) ನಾಯಕ ಹೇಳಿದ್ದಾರೆ.