ಭಾರೀ ಪ್ರಮಾಣದಲ್ಲಿ ಹಾವಿನ ವಿಷ ಶೇಖರಿಸಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಮಾಲ್ ಸಮೇತ ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಜಲ್ಪಾಯ್ಗುರಿ ಜಿಲ್ಲೆಯಲ್ಲಿ ಜರುಗಿದೆ.
ದಕ್ಷಿಣ ದಿಂಜಾಪುರ ಜಿಲ್ಲೆಯವನಾದ ಆಪಾದಿತನ ಬಳಿ 13 ಕೋಟಿ ರೂಪಾಯಿ ಮೌಲ್ಯದ ಹಾವಿನ ವಿಷ ವಶಪಡಿಸಿಕೊಳ್ಳಲಾಗಿದೆ.
ʼಮಾಹಿತಿ ಹಕ್ಕು ಕಾಯ್ದೆʼ ಅಡಿ ಮಾಜಿ ಶಾಸಕರುಗಳ ಕುರಿತು ಶಾಕಿಂಗ್ ಸಂಗತಿ ಬಹಿರಂಗ
ಗೋರುಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಈತನನ್ನು ಸೆರೆ ಹಿಡಿಯಲಾಗಿದ್ದು, ಈ ವೇಳೆ ಆತನ ಕೈಯಲ್ಲಿದ್ದ ಮೂರು ಜಾರ್ ವಿಷವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಮಾಲನ್ನು ಚೀನಾಗೆ ಕಳ್ಳಸಾಗಾಟ ಮಾಡಲು ಇಟ್ಟುಕೊಳ್ಳಲಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆಪಾದಿತನನ್ನು ಸ್ಥಳೀಯ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ಆರು ದಿನಗಳ ಮಟ್ಟಿಗೆ ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.