ಬೆಂಗಳೂರು: ಸೆಪ್ಟೆಂಬರ್ 13ರಿಂದ ವಿಧಾನಮಂಡಲ ಅಧಿವೇಶ ಆರಂಭವಾಗಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಇದು ಮೊದಲ ಅಧಿವೇಶವಾಗಿದೆ. ಆದರೆ ಅಧಿವೇಶನದಿಂದ ದೂರ ಉಳಿಯಲು ಜಾರಕಿಹೊಳಿ ಸಹೋದರರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಎಸ್ ವೈ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣ ಬಹಿರಂಗ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾರಕಿಹೊಳಿ ವಿರುದ್ಧದ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಿತ್ತು. ಆದರೆ ಪ್ರಕರಣವನ್ನು ಈವರೆಗೆ ಸರ್ಕಾರ ಬಗೆಹರಿಸಿಲ್ಲ. ಇನ್ನೊಂದೆಡೆ ಕೋರ್ಟ್ ನಲ್ಲಿ ವಿಚಾರಣೆ ಮುಂದೂಡಿಕೆಯಾಗುತ್ತಲೇ ಇದೆ. ಮತ್ತೊಂದೆಡೆ ಸಿಎಂ ಬದಲಾವಣೆಯಾಗಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಹೊಸ ಸಂಪುಟ ರಚನೆಯಾದರೂ ಕೂಡ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸರ್ಕಾರಕ್ಕಾಗಲಿ, ಬಿಜೆಪಿ ನಾಯಕರಿಗಾಗಲಿ ಯಾವುದೇ ಆಸಕ್ತಿ ಇದ್ದಂತಿಲ್ಲ. ಸರ್ಕಾರದ ಈ ನಡೆಯಿಂದ ಅಸಮಾಧಾನಗೊಂಡಿರುವ ಜಾರಕಿಹೊಳಿ ಸಹೋದರರು ಅಧಿವೇಶಕ್ಕೆ ಗೈರಾಗಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
BIG NEWS: ಭೀಕರ ರಸ್ತೆ ಅಪಘಾತಕ್ಕೀಡಾದ ಟಾಲಿವುಡ್ ನಟ; ಪ್ರಜ್ಞಾಹೀತ ಸ್ಥಿತಿ ತಲುಪಿದ ಸಾಯಿ ಧರಮ್ ತೇಜ್; ಐಸಿಯುವಲ್ಲಿ ಮುಂದುವರೆದ ಚಿಕಿತ್ಸೆ
ರಮೇಶ್ ಜಾರಕಿಹೊಳಿಗಲ್ಲದಿದ್ದರೂ ಸಹೋದರ ಬಾಲಚಂದ್ರ ಜಾರಕಿಹೊಳಿಗಾದರೂ ಸಚಿವ ಸ್ಥಾನ ನೀಡುವಂತೆ ಜಾರಕಿಹೊಳಿ ಸಹೋದರರು ಹೈಕಮಾಂಡ್ ಹಾಗೂ ಬಿಜೆಪಿ ರಾಜ್ಯ ನಾಯಕರ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾದಂತಿಲ್ಲ. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ತಮ್ಮನ್ನು ಸರ್ಕಾರದಿಂದಲೇ ಕಡೆಗಣಿಸಲಾಗುತ್ತಿದೆ. ತಮ್ಮ ಪರವಾಗಿ ಬಿಜೆಪಿ ನಾಯಕರು ಸ್ಪಷ್ಟವಾಗಿ ಮಾತನಾಡುತ್ತಲೂ ಇಲ್ಲ ಎಂದು ಬೇಸರಗೊಂಡಿರುವ ಜಾರಕಿಹೊಳಿ ಸಹೋದರರರು ಒಂದು ದಿನ ಸಾಂಕೇತಿಕವಾಗಿ ಅಧಿವೇಶನಕ್ಕೆ ಹಾಜರಾಗಿ ಬಳಿಕ ಗೈರಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.