ಇಟಾಲಿಯನ್ ದ್ವೀಪವಾದ ಎಲ್ಬಾದ ಪೋರ್ಟೊಫೆರಾಯೊ ಪಟ್ಟಣದಲ್ಲಿರುವ ದರ್ಸೇನಾ ಮೆಡಿಸಿಯಾದಲ್ಲಿ ನೀರಿನ ಮೇಲೆ ವಿಚಿತ್ರ ಮೀನೊಂದು ಕಂಡು ಬಂದಿದೆ.
ವಿಶಿಷ್ಟ ಮೀನನ್ನು ನೋಡಿದ ಇಟಾಲಿಯನ್ ನಾವಿಕರ ಗುಂಪೊಂದು ದಂಗಾಗಿದೆ.
ಹೌದು, ನೌಕಾ ಹಡಗಿನ ನಾವಿಕರು ವಿಚಿತ್ರ ಮೀನನ್ನು ಹೊರತೆಗೆದು ನೋಡಿದಾಗ ಅದು ನೋಡಲು ಹಂದಿ ಮತ್ತು ಶಾರ್ಕ್ ನಂತೆ ಕಂಡುಬಂದಿದೆ.
ದೇಹ ಶಾರ್ಕ್ ನಂತಿದ್ದರೆ, ಹಂದಿಯನ್ನು ಹೋಲುವ ಮುಖವನ್ನು ಈ ಮೀನು ಹೊಂದಿದೆ. ಈ ಮೀನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ರಫ್ ಶಾರ್ಕ್ – ಆಕ್ಸಿನೋಟಸ್ ಸೆಂಟ್ರಿನಾ ಎಂದು ತಿಳಿದು ಬಂದಿದೆ. ಆಳ ಸಮುದ್ರದಲ್ಲಿ ಜೀವಿಸುವ ಇದನ್ನು ಹಂದಿ ಮುಖದ ಶಾರ್ಕ್ ಅಂತಾ ಕೂಡ ಕರೆಯುತ್ತಾರೆ.
‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಹ್ಯಾಂಗೋವರ್’ ಲಿರಿಕಲ್ ಸಾಂಗ್ ರಿಲೀಸ್
ಪ್ರಸ್ತುತ ಈ ಮೀನನ್ನು, ಇಂಟರ್ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ ಸಂಸ್ಥೆಯು ಅಳಿವಿನಂಚಿನಲ್ಲಿರುವ ಜಲಚರ ಎಂದು ಪಟ್ಟಿ ಮಾಡಿದೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.