alex Certify ಮೊದಲು ಖರೀದಿ ಬಳಿಕ ಪಾವತಿ: ನಿಮಗಿರಲಿ ಈ ಕಾರ್ಡ್‌ಗಳ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲು ಖರೀದಿ ಬಳಿಕ ಪಾವತಿ: ನಿಮಗಿರಲಿ ಈ ಕಾರ್ಡ್‌ಗಳ ಕುರಿತ ಮಾಹಿತಿ

ಬಳಕೆದಾರರ ಕೊಳ್ಳುಬಾಕತನಕ್ಕೆ ಇನ್ನಷ್ಟು ನೀರೆರೆಯುತ್ತಾ ಬಂದಿರುವ ಆರ್ಥಿಕ ತಂತ್ರಜ್ಞಾನ ಹಾಗೂ ಇ-ಕಾಮರ್ಸ್ ದಿಗ್ಗಜರು ದುಡ್ಡು ಖರ್ಚು ಮಾಡಲು ಇದೀಗ ಇನ್ನಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸಲು ಮುಂದಾಗಿದ್ದಾರೆ.

ಈಗ ಖರೀದಿಸಿ ಬಳಿಕ ಪಾವತಿ ಮಾಡುವ ಸ್ಕೀಂಗಳ ವಿಚಾರದಲ್ಲಿ ಇರುವ ಅತ್ಯಂತ ಜನಪ್ರಿಯ ಆಯ್ಕೆ ಕ್ರೆಡಿಟ್ ಕಾರ್ಡ್. ಆದರೆ ಕ್ರೆಡಿಟ್ ಕಾರ್ಡ್ ಇಲ್ಲದೇ ಹೀಗೆ ಮುಂಗಡ ಖರೀದಿ ಮಾಡುವ ಇನ್ನೊಂದಿಷ್ಟು ಸಾಧ್ಯತೆಗಳು ಇದೀಗ ತೆರದುಕೊಂಡಿವೆ.

’ಈಗ ಖರೀದಿಸಿ ಬಳಿಕ ಪಾವತಿಸಿ’ ಎಂಬ ಅರ್ಥದ BNPL ಸ್ಕೀಂ ಮೂಲಕ ಹೆಸರೇ ಹೇಳುವಂತೆ ಮೊದಲು ಉತ್ಪನ್ನಗಳ ಖರೀದಿ ಮಾಡಿ ನಂತರ ಪಾವತಿ ಮಾಡಬಹುದಾಗಿದೆ. BNPL ಜೊತೆಗೆ ಪಾಲುದಾರಿಕೆ ಹೊಂದಿರುವ ವ್ಯಾಪಾರಸ್ಥರ ಬಳಿ ಉತ್ಪನ್ನಗಳನ್ನು ಖರೀದಿ ಮಾಡುವ ವೇಳೆ ನೀವು 10-15 ದಿನಗಳ ಕಾಲಮಿತಿಯಲ್ಲಿ ಹಂತಹಂತವಾಗಿ ದುಡ್ಡು ಪಾವತಿ ಮಾಡಬಹುದಾಗಿದೆ.

ನಿಗದಿತ ಕಾಲಮಿತಿಯಲ್ಲಿ ದುಡ್ಡು ಪಾವತಿ ಮಾಡಲಾಗದೇ ಇದ್ದಲ್ಲಿ ಬಡ್ಡಿ ಸೇರಿಸಿ ಕೊಡಬೇಕಾಗುತ್ತದೆ. ಕೆಲವೊಂದು BNPL ಯೋಜನೆಗಳು ನೋ-ಕಾಸ್ಟ್‌ ಇಎಂಐಗಳ ಮೂಲಕ 3-6 ತಿಂಗಳ ಒಳಗೆ ಮರುಪಾವತಿ ಮಾಡುವ ಆಯ್ಕೆ ಒಳಗೊಂಡಿವೆ.

BNPL ಸೇವೆಗಳನ್ನು ಒದಗಿಸುತ್ತಿರುವ ಫಿನ್‌ಟೆಕ್ ಕಂಪನಿಗಳಲ್ಲಿ ಅಮೆಜ಼ಾನ್‌ಪೇ, ಲೇಜ಼ಿಪೇ, ಸಿಂಪ್ಲ್‌, ಸ್ಲೈಸ್ ಹಾಗೂ ಜ಼ೆಸ್ಟ್‌ಮನಿಗಳೂ ಸೇರಿವೆ.

BNPL ನ ಕೆಲ ಆಯ್ಕೆಗಳು ಇಂತಿವೆ:

ಯುನಿ

ಪೇ 1/3 ಹೆಸರಿನಲ್ಲಿ ವಿಶಿಷ್ಟವಾದ BNPL ಸ್ಕೀಂಗೆ ಚಾಲನೆ ಕೊಟ್ಟಿರುವ ಯುನಿ ಮಾರುಕಟ್ಟೆಯಲ್ಲಿ ಅತ್ಯಂತ ಸುದೀರ್ಘವಾದ ಬಡ್ಡಿ ರಹಿತ ಕ್ರೆಡಿಟ್ ಅವಧಿ ಕೊಡುತ್ತಿದೆ. ಹೆಸರೇ ಹೇಳುವಂತೆ, ಗ್ರಾಹಕರು ತಮ್ಮ ತಿಂಗಳ ಖರ್ಚನ್ನು ಮೂರು ಭಾಗಗಳಾಗಿ ಮೂರು ತಿಂಗಳವರೆಗೂ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಪಾವತಿ ಮಾಡಬಹುದಾಗಿದೆ.

ಕ್ರೆಡಿಟ್‌ ಅನ್ನು ಮುಂಚಿತವಾಗಿ ಪಾವತಿ ಮಾಡಿದಲ್ಲಿ 1% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. 20,000 ರೂ.ಗಳಿಂದ ಆರು ಲಕ್ಷ ರೂ.ಗಳವರೆಗೂ ಕ್ರೆಡಿಟ್ ಮಿತಿಯನ್ನು ಯುನಿ ಕೊಡಮಾಡುತ್ತದೆ. ಪ್ಲೇಸ್ಟೋರ್‌ನಲ್ಲಿ ಯುನಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಸರಳವಾದ ಪ್ರಕ್ರಿಯೆ ಮುಖಾಂತರ ಕಾರ್ಡ್ ಪಡೆಯಬಹುದಾಗಿದೆ. ಡಿಜಿಟಲ್ ಕಾರ್ಡ್‌ ಅನ್ನು ತ್ವರಿತವಾಗಿ ಆಕ್ಟಿವೇಟ್ ಮಾಡಿ ದೈಹಿಕ ರೂಪದ ಕಾರ್ಡ್‌ ಅನ್ನು ಮೂರು ದಿನಗಳ ಒಳಗೆ ಡೆಲಿವರಿ ನೀಡಲಾಗುವುದು.

ಸಿಂಪಲ್ :

2016ರಿಂದ ಚಾಲ್ತಿಯಲ್ಲಿರುವ ಸಿಂಪಲ್, ಬಿಲ್ ಪಾವತಿ ಮಾಡುವ ಸಂದರ್ಭಕ್ಕೆ ಸುಲಭ ಕ್ರೆಡಿಟ್‌ ಒದಗಿಸುತ್ತದೆ. 2,000-20,000 ರೂ.ಗಳವರೆಗೆ ಕ್ರೆಡಿಟ್ ವ್ಯಾಪ್ತಿ ಹೊಂದಿರುವ ಇದು ಸಾಮಾನ್ಯವಾಗಿ ಇ-ಕಾಮರ್ಸ್ ಹಾಗೂ ರೀಟೇಲ್ ಖರೀದಿದಾರರಿಗೆ ಹೇಳಿ ಮಾಡಿಸಿದಂತೆ ಇದೆ.

ಸ್ಲೈಸ್ :

10,000 ರೂಗಳಿಂದ ಒಂದು ಲಕ್ಷ ರೂಪಾಯಿವರೆಗೂ ಸಾಲ ನೀಡುವ ಸ್ಲೈಸ್‌ ತನ್ನ ಸೂಪರ್‌ ಕಾರ್ಡ್ ಮೂಲಕ ಪ್ರತಿ ವಹಿವಾಟಿನ ಮೇಲೂ 2%ದಷ್ಟು ರಿವಾರ್ಡ್ ಕೊಡುವುದಲ್ಲದೇ, ಇದನ್ನು ಕೂಡಲೇ ನಗದಾಗಿ ಪರಿವರ್ತಿಸಲು ಅವಕಾಶ ನೀಡುತ್ತದೆ.

ಲೇಜ಼ಿಪೇ :

ಬಹುವರ್ತಕರೊಂದಿಗೆ ವಹಿವಾಟು ನಡೆಸಲು ಅನುವಾಗುವ ಡ್ಯಾಶ್‌ ಬೋರ್ಡ್ ಕೊಡುವ ಲೇಜ಼ಿಪೇ, ಪ್ರತಿ ತಿಂಗಳ 1ನೇ ಹಾಗೂ 16ನೇ ತಾರೀಕುಗಳಂದು ಬಿಲ್ ವಿತರಿಸುತ್ತದೆ. ಬಿಲ್ ಬಂದ ಮೂರು ದಿನಗಳ ಒಳಗೆ ಪಾವತಿ ಮಾಡದೇ ಇದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ.

BIG NEWS: ಇ-ಕಾಮರ್ಸ್ ವಂಚನೆ ತಡೆಗೆ ಕೇಂದ್ರದಿಂದ ಮಹತ್ವದ ಕ್ರಮ, ನಿಯಮದಲ್ಲಿ ಬದಲಾವಣೆ

ಓಲಾ ಮನಿ ಪೋಸ್ಟ್‌ಪೇಡ್ :

ತ್ವರಿತ ಹಾಗೂ ಸರಳ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಓಲಾ ಮನಿ ಪೋಸ್ಟ್‌ಪೇಡ್‌ ಮೂಲಕ ಓಲಾ ರೈಡ್‌ಗಳು ಹಾಗೂ ಇತರೆ ಆನ್ಲೈನ್ ಸೇವೆಗಳಿಗೆ ಪಾವತಿ ಮಾಡಬಹುದಾಗಿದೆ.

ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೇ ಈ ಸೇವೆಗಳನ್ನು ತನ್ನ ಗ್ರಾಹಕರಿಗೆ ಓಲಾ ಕೊಡಮಾಡುತ್ತಿದೆ. ತನ್ನ ಕ್ಯಾಬ್‌ ಸೇವೆಗಳನ್ನು ಪಡೆಯುವ ಗ್ರಾಹಕರು ಈ ಅಪ್ಲಿಕೇಶನ್ ಮೂಲಕ 15 ದಿನಗಳ ಒಳಗೆ ಸೇವೆಯ ವೆಚ್ಚ ಭರಿಸಲು ಓಲಾ ಅವಕಾಶ ಕೊಡುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...