ಇದೊಂದು ವಿಚಿತ್ರ ಕಥೆ. ಕುಡಿದ ಮತ್ತಿನಲ್ಲಿ ಕಾನನ ಸೇರಿದ ಕುಡುಕನೊಬ್ಬ ಅಲ್ಲಿಂದ ಪಾರಾದ ಕಥೆ ಇದು.
ಹೆಸರು ಫ್ರಾಂಸಿಸ್ಕಸ್ ಜಾನಿಸ್ ವ್ಯಾನ್ ರೋಸುಮ್. 78 ವರ್ಷದ ಈತ ಥೈಲ್ಯಾಂಡ್ ದೇಶದ ನಿವಾಸಿ. ಒಂದು ದಿನ ಸ್ಥಳೀಯ ಬಾರ್ನಲ್ಲಿ ಬಿಯರ್ ಕುಡಿದು, ತನ್ನ ಬೈಕ್ನಲ್ಲಿ ಮನೆ ಕಡೆ ಹೊರಟ.
ಆದರೆ ಆತ ಸೇರಿದ್ದು ಕಾಡೊಂದಕ್ಕೆ, ಅಲ್ಲಿ ಒಂದಲ್ಲ, ಎರಡಲ್ಲ ನಾಲ್ಕು ದಿನ ಕಳೆದ. ಆತನ ಹೆಂಡತಿ ರಚೋಟ ಚನ್ವಿಜಿತ್ ಪತಿ ಬಾರದೆ ಕಂಡಕಂಡಲ್ಲಿ ಹುಡುಕಿದ್ದಾಳೆ.
ಈ ಮಧ್ಯೆ, ಫ್ರಾಂಸಿಸ್ಕಸ್ ಅವಳಿಗೆ ಕರೆಮಾಡಲು ಪ್ರಯತ್ನ ಮಾಡಿದ್ದಾನಾದರೂ, ಕಾಡಿನ ನಡುವೆ ಇದ್ದ ಕಾರಣ ಸಿಗ್ನಲ್ ಸಿಗದೇ ಕರೆ ಹೋಗಿಲ್ಲ. ಆದರೆ ಆತನ ಬೈಕ್ ನೋಡಿದ ಸ್ಥಳೀಯರು ಹುಡುಕುತ್ತಿದ್ದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ನಾಲ್ಕು ದಿನದ ಬಳಿಕ ಅಂತೂ ಇಂತು ಈತನನ್ನು ಹುಡುಕುವಲ್ಲಿ ಅವರು ಯಶಸ್ವಿಯಾದರು.
ಅಧ್ಯಕ್ಷರು ಉದ್ಘಾಟನೆ ಮಾಡುವ ಮುನ್ನವೇ ರಿಬ್ಬನ್ ಕತ್ತರಿಸಿದ ಬಾಲಕ
ಆತನನ್ನು ರಕ್ಷಿಸಿ ವ್ಯಾನ್ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಫ್ರಾಂಸಿಸ್ಕಸ್ ಮೈ ತುಂಬಾ ಸೊಳ್ಳೆಗಳು ಕಚ್ಚಿ ರಕ್ತ ಬರುತ್ತಿತ್ತು. ಹೆಚ್ಚಿನ ಬಿರುಗಾಳಿ ಬಂದ ಕಾರಣ ಆತ, ಅಲ್ಲೇ ಇದ್ದ ಗುಂಡಿಯೊಂದರಲ್ಲಿ ಅಡಗಿಕೊಂಡಿದ್ದು, ನಿದ್ದೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ನಂತರ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದೃಷ್ಟವಶಾತ್ ಹೆಚ್ಚಿನ ಸಮಸ್ಯೆಯಾಗಿಲ್ಲ ಎನ್ನಲಾಗಿದೆ.
“ನಾನು ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ, ಫೋನಿನ ಬ್ಯಾಟರಿ ಹೋಗಿತ್ತು, ನನ್ನ ಗಾಡಿಯಲ್ಲಿ ಇಂಧನವಿರಲಿಲ್ಲ, ಜೋರು ಮಳೆ ಬೇರೆ ಮತ್ತು ಏನು ತಿಂದಿರಲಿಲ್ಲ” ಎಂದು ತಿಳಿಸಿದ್ದಾನೆ. “ನಾನು ಹೆಚ್ಚಾಗಿ ಕುಡಿದಿರಲಿಲ್ಲ, ಆದರೆ ಮಳೆ ಬರುತ್ತಿದ್ದ ಕಾರಣ ಬೇರೆ ರಸ್ತೆಗೆ ಹೋಗಿಬಿಟ್ಟೆ, ಹಾಗಾಗಿ ದಾರಿ ತಪ್ಪಿದೆ” ಎಂದು ಹೇಳಿಕೊಂಡಿದ್ದಾನೆ.
ರಕ್ಷಿಸಿದ್ದಕ್ಕೆ ಆತ ಧನ್ಯವಾದಗಳನ್ನು ಹೇಳಿದ್ದಾನೆ. ಪತ್ನಿಯನ್ನು ಮತ್ತೊಮ್ಮೆ ನೋಡಿದಕ್ಕೆ ಖುಷಿಯಾಗಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾನೆ.