ತೆರಿಗೆಗೆ ಸಂಬಂಧಿತ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆ ಪಾವತಿದಾರರಿಗೆ ಸೆ. 30ರವರೆಗೆ ಅವಕಾಶ ಕಲ್ಪಿಸಿದೆ.
ಆದಾಯ ತೆರಿಗೆ ಇತ್ಯರ್ಥ ಮಂಡಳಿ (ಐಟಿಎಸ್ಸಿ) ಮಟ್ಟದ ವ್ಯಾಜ್ಯಗಳಿಗೆ ಮಾತ್ರವೇ ಇದು ಅನ್ವಯವಾಗಲಿದೆ.
2021ರ ಫೆ.1 ರಿಂದ ಹಣಕಾಸು ಕಾಯಿದೆ ಅಡಿಯಲ್ಲಿ ಐಟಿಎಸ್ಸಿ ವ್ಯಾಜ್ಯ ಇತ್ಯರ್ಥ ಆರಂಭಿಸಿದೆ. ಜನವರಿ 31ರವರೆಗೆ ಸಲ್ಲಿಕೆಯಾದ ವ್ಯಾಜ್ಯಗಳನ್ನು ಮಾತ್ರವೇ ಸದ್ಯಕ್ಕೆ ಇತ್ಯರ್ಥ ಮಾಡಿಕೊಡಲು ಐಟಿಎಸ್ಸಿ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅರ್ಜಿಗಳ ಸ್ವೀಕೃತಿ ಆಗಲಿದೆ.
GOOD NEWS: ‘ನಿಫಾ’ ನಿಯಂತ್ರಣಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ
ಕೆಲವು ರಾಜ್ಯಗಳಲ್ಲಿ ಮಾತ್ರ ಹೈಕೋರ್ಟ್ ನಿರ್ದೇಶನದ ಮೇರೆಗೆ ಗಂಭೀರ ಸ್ವರೂಪದ ವ್ಯಾಜ್ಯಗಳ ಅರ್ಜಿಗಳು ಫೆ. 1ರ ನಂತರ ಸಲ್ಲಿಕೆಯಾಗಿದ್ದರೂ ಸ್ವೀಕೃತಿ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿರುವ ಕೇಂದ್ರ ಹಣಕಾಸು ಸಚಿವಾಲಯವು ಸೆ.30ರವರೆಗೆ ಎಲ್ಲ ವ್ಯಾಜ್ಯಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
1961ರ ಆದಾಯ ತೆರಿಗೆ ಕಾಯಿದೆಯಲ್ಲಿನ ಕೆಲವು ನಿಯಮಾವಳಿಗಳನ್ನು ಪರಿಷ್ಕರಿಸಿ ಹಣಕಾಸು ಕಾಯಿದೆ 2021 ಅನ್ನು ಮಂಡಿಸಲಾಗಿತ್ತು. ಈ ವಿಧೇಯಕವನ್ನು ಕಳೆದ ಫೆ.1 ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.