ಶಿಕ್ಷಣದ ಬಗ್ಗೆ ತಾಲಿಬಾನಿಗಳು ಏನು ಯೋಚನೆ ಮಾಡ್ತಾರೆ ಎಂಬುದು ಅಫ್ಘಾನ್ ಶಿಕ್ಷಣ ಸಚಿವರ ಹೇಳಿಕೆಯಿಂದ ತಿಳಿಯಬಹುದು.
ಅಫ್ಘಾನಿಸ್ತಾನದ ಶಿಕ್ಷಣ ಸಚಿವರ ಹುದ್ದೆಗೇರಿರುವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್, ಶಿಕ್ಷಣದ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.
ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿಗೆ ಯಾವುದೇ ಮೌಲ್ಯವಿಲ್ಲ. ಶಕ್ತಿಗಿಂತ ಹೆಚ್ಚು ಶಿಕ್ಷಣ ಮುಖ್ಯವಲ್ಲ. ತಾಲಿಬಾನಿಗಳು ಬಲದಿಂದ ಅಧಿಕಾರ ಪಡೆದಿದ್ದಾರೆಂದು ಶೇಖ್ ಮೌಲ್ವಿ ಹೇಳಿದ್ದಾರೆ.
ತಾಲಿಬಾನ್ ಸರ್ಕಾರದ ಘೋಷಣೆಯಾಗಿದೆ. ಅಲ್ಲಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಶಿಕ್ಷಣ ಸಚಿವರಾಗಿ ಶೇಖ್ ಮೌಲ್ವಿ ನೂರುಲ್ಲಾ ಮುನೀರ್ ಆಯ್ಕೆಯಾಗಿದ್ದಾರೆ. ಮುನೀರ್ ಇದಕ್ಕೆ ಅರ್ಹರೇ ಎಂಬ ಪ್ರಶ್ನೆ, ಅವರ ಈ ಹೇಳಿಕೆ ನಂತ್ರ ಹುಟ್ಟಿಕೊಂಡಿದೆ. ಮೌಲ್ವಿಗಳಿಗೆ ಯಾವುದೇ ಪದವಿಯಿಲ್ಲ. ಆದ್ರೂ ಅವರು ಶ್ರೇಷ್ಠರು ಎಂದು ಮುನೀರ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ಶಿಕ್ಷಣ ಸಚಿವ ಮುನೀರ್, ನನ್ನ ಬಳಿ ಯಾವುದೇ ಪದವಿಯಿಲ್ಲ ಎಂದಿದ್ದಾರೆ. ತಾಲಿಬಾನಿ ನಾಯಕರ ಬಳಿ ಪದವಿಯಿಲ್ಲ. ಆದರೂ ಅವರು ಅಧಿಕಾರಕ್ಕೆ ಬಂದಿದ್ದಾರೆ. ಅನೇಕರು ಪ್ರೌಢ ಶಾಲೆಯನ್ನು ಪೂರ್ಣಗೊಳಿಸಿಲ್ಲ. ಆದ್ರೆ ಶಕ್ತಿಯುತವಾಗಿದ್ದಾರೆ. ಪದವಿಗಿಂತ ಶಕ್ತಿ ಮುಖ್ಯವೆಂದು ಅವರು ಹೇಳಿದ್ದಾರೆ.
ಈ ತಾಲಿಬಾನ್ ಸರ್ಕಾರದಲ್ಲಿ ಭಯೋತ್ಪಾದಕರೂ ಸ್ಥಾನ ಪಡೆದಿದ್ದಾರೆ. ತಾಲಿಬಾನ್ ಸಿರಾಜುದ್ದೀನ್ ಹಕ್ಕಾನಿಯನ್ನು ಆಂತರಿಕ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸಿರಾಜುದ್ದೀನ್, ಅಮೆರಿಕದ ಭಯೋತ್ಪಾದಕರ ಪಟ್ಟಿಯಲ್ಲಿ ಮೋಸ್ಟ್ ವಾಂಟೆಡ್. ಯುಎಸ್ ಸುಮಾರು 37 ಕೋಟಿ ಬಹುಮಾನವನ್ನು ಘೋಷಿಸಿದೆ.