alex Certify BIG NEWS: ಜ.1ರಿಂದ ಬದಲಾಗಲಿದೆ ATM, ಡೆಬಿಟ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜ.1ರಿಂದ ಬದಲಾಗಲಿದೆ ATM, ಡೆಬಿಟ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮ

ಆರ್ಬಿಐ, ಡೇಟಾ ಸಂಗ್ರಹಕ್ಕೆ ಸಂಬಂಧಿಸಿದಂತೆ ಟೋಕನೈಸೇಶನ್ ನಿಯಮ ಜಾರಿಗೊಳಿಸಿದೆ. ಗ್ರಾಹಕರು ತಮ್ಮ ಕಾರ್ಡ್ ವಿವರಗಳನ್ನು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ.

ಈ ಹಿಂದೆ ಕಾರ್ಡ್ ಬಳಕೆದಾರರು, ಆಹಾರ ವಿತರಣಾ ಆ್ಯಪ್, ಕ್ಯಾಬ್ ಸೇವಾ ಕಂಪನಿಗಳ ಆಪ್ ನೊಂದಿಗೆ, ಕಾರ್ಡ್ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು. ಅಪ್ಲಿಕೇಷನ್ ಗಳಲ್ಲಿ ಗ್ರಾಹಕರ ಡೇಟಾ ಸಂಗ್ರಹವಾಗ್ತಿತ್ತು. ಇದ್ರಿಂದ ಮೋಸ, ವಂಚನೆ ಭಯವಿತ್ತು.

ಆರ್ಬಿಐ ಜಾರಿಗೊಳಿಸಿರುವ ಟೋಕನ್ ಸೇವೆಯು ಗ್ರಾಹಕರ ಇಚ್ಛೆಯನ್ನು ಅವಲಂಬಿಸಿರುತ್ತದೆ. ಗ್ರಾಹಕರು ಅವಶ್ಯವೆನಿಸಿದ್ರೆ ಅದನ್ನು ತೆಗೆದುಕೊಳ್ಳಬಹುದು. ಇದು ಯಾವ ಗ್ರಾಹಕನಿಗೂ ಕಡ್ಡಾಯವಾಗಿರುವುದಿಲ್ಲ. ಆರ್ಬಿಐನ ಹೊಸ ನಿಯಮಗಳ ಪ್ರಕಾರ, ಜನವರಿ 1, 2022 ರಿಂದ, ಕಾರ್ಡ್ ವ್ಯವಹಾರ/ಪಾವತಿಗಳಲ್ಲಿ, ಕಾರ್ಡ್ ನೀಡುವ ಬ್ಯಾಂಕ್ ಅಥವಾ ಕಾರ್ಡ್ ನೆಟ್ವರ್ಕ್ ಹೊರತುಪಡಿಸಿ ಯಾವುದೇ ಭೌತಿಕ ಕಾರ್ಡ್ ಡೇಟಾ ಸಂಗ್ರಹಣೆಯಾಗುವುದಿಲ್ಲ.

ವಹಿವಾಟು ಟ್ರ್ಯಾಕಿಂಗ್ ಅಥವಾ ಸಮನ್ವಯ ಉದ್ದೇಶಗಳಿಗಾಗಿ ಸೀಮಿತ ಡೇಟಾವನ್ನು ಸಂಗ್ರಹಿಸಬಹುದು. ಮೂಲ ಕಾರ್ಡ್ ಸಂಖ್ಯೆ ಮತ್ತು ಕಾರ್ಡ್ ನೀಡುವವರ ಹೆಸರಿನ ಕೊನೆಯ ನಾಲ್ಕು ಅಂಕೆಗಳವರೆಗಿನ ಸಂಗ್ರಹಕ್ಕೆ ವಿನಾಯಿತಿ ನೀಡಲಾಗುತ್ತದೆ.

ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಡೆಸ್ಕ್ ಟಾಪ್ ಸ್ಮಾರ್ಟ್ ವಾಚ್ ಇತ್ಯಾದಿಗಳ ಮೂಲಕ ಪಾವತಿಗಳ ಮೇಲೆ ಈ ನಿಯಮವು ಅನ್ವಯವಾಗುತ್ತದೆ. ಟೋಕನ್ ಸೇವೆ ಒದಗಿಸುವವರು ನೀಡುವ ಕಾರ್ಡುಗಳಿಗೆ ಮಾತ್ರ ಟೋಕನೈಸೇಶನ್ ಸೌಲಭ್ಯವನ್ನು ನೀಡಲಾಗುತ್ತದೆ.

ಬ್ಯಾಂಕ್ ಎಟಿಎಂಗೆ ಸಂಬಂಧಿಸಿದ ನಿಯಮಗಳು ಜನವರಿ 1ರಿಂದ ಬದಲಾಗಲಿವೆ. ಎಟಿಎಂಗಳಿಂದ, ನಿಗದಿತ ಉಚಿತ ಮಿತಿಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಿದ್ರೆ ವಿಧಿಸುವ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್ ಗೆ, ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...