2011ಕ್ಕೂ ಮೊದಲು ಖರೀದಿಸಿದ ಆ್ಯಂಡ್ರಾಯ್ಡ್ ಆವೃತ್ತಿಯ ಸ್ಮಾರ್ಟ್ ಫೋನ್ ಹಾಗೂ ಐಫೋನ್ ಗಳಲ್ಲಿ ನವೆಂಬರ್ ಒಂದನೇ ತಾರೀಖಿನಿಂದ ಜನಪ್ರಿಯ ‘ವಾಟ್ಸಾಪ್’ ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪನಿ ಹೇಳಿದೆ.
ಅಂದರೆ, ಕನಿಷ್ಠ ಆ್ಯಂಡ್ರಾಯ್ಡ್ 4.1 ಜೆಲ್ಲಿ ಬೀನ್ ಆವೃತ್ತಿಯ ಸ್ಮಾರ್ಟ್ ಫೋನ್ ನಿಮ್ಮ ಬಳಿ ಇದ್ದರೆ ಉತ್ತಮ. ಇದನ್ನು ಅರಿಯಲು ನಿಮ್ಮ ಮೊಬೈಲ್ ನಲ್ಲಿನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ಕೊಡಿ. ಅಲ್ಲಿ ‘ಅಬೌಟ್ ಫೋನ್’ ಇರುವ ಸೆಕ್ಷನ್ ಕ್ಲಿಕ್ ಮಾಡಿರಿ. ನಿಮ್ಮ ಮೊಬೈಲ್ ಆವೃತ್ತಿ ಬಹಳ ಹಿಂದಿನದ್ದಾಗಿದ್ದಲ್ಲಿ ಲೇಟೆಸ್ಟ್ ಆವೃತ್ತಿಗೆ ಅಪ್ ಡೇಟ್ ಮಾಡಿಕೊಳ್ಳಿರಿ.
ಇದೇ ರೀತಿ ಐಫೋನ್ ಗಳಲ್ಲಿ ಕೂಡ ಐಒಎಸ್ 10 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿ ಇದ್ದರೆ ಮಾತ್ರವೇ ವಾಟ್ಸಾಪ್ ಕಾರ್ಯನಿರ್ವಹಣೆ ಮುಂದುವರಿಯಲಿದೆ. ಜಿಯೋ ಫೋನ್ ಬಳಸುವವರು ಚಿಂತೆ ಪಡಬೇಕಿಲ್ಲ. ಜಿಯೊಫೋನ್ ಹಾಗೂ ಜಿಯೊಫೋನ್ 2ಗೆ ವಾಟ್ಸಾಪ್ ಪೂರ್ಣ ನೆರವು ನೀಡಲಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಜೋಸ್ ಬಟ್ಲರ್
ಹಾಗಾದರೆ, ವಾಟ್ಸಾಪ್ ನಿಷ್ಕ್ರಿಯಗೊಳ್ಳುವ ಪ್ರಮುಖ ಮೊಬೈಲ್ ಗಳ ವಿವರ ಇಲ್ಲಿದೆ.
– ಆ್ಯಪಲ್ ಐಫೋನ್ ಎಸ್ಇ, 6ಎಸ್, 6ಎಸ್ ಪ್ಲಸ್
– ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್ , ಟ್ರೆಂಡ್2 , ಗ್ಯಾಲಕ್ಸಿ ಎಸ್2, ಗ್ಯಾಲಕ್ಸಿ ಮಿನಿ, ಗ್ಯಾಲಕ್ಸಿ ಎಕ್ಸ್ ಕವರ್2, ಗ್ಯಾಲಕ್ಸಿ ಕೋರ್, ಎಸ್2
– ಎಲ್ ಜಿ ಲುಸಿಡ್2, ಆಪ್ಟಿಮಸ್ ಎಫ್7, ಎಫ್5, ಎಲ್3 ಡುಯಲ್, 5-6-7ನೇ ಸರಣಿಗಳು, ನೈಟ್ರೊ ಎಚ್ ಡಿ, 4ಎಕ್ಸ್ ಎಚ್ ಡಿ, ಎಫ್3ಕ್ಯು
– ಝಡ್ ಟಿ ಇ ಗ್ರ್ಯಾಂಡ್ ಎಸ್ ಫ್ಲೆಕ್ಸ್ , ಎಕ್ಸ್ ಕ್ವಾಡ್ ವಿ987, ಗ್ರ್ಯಾಂಡ್ ಮೆಮೊ
– ಹುಯಾವೇ ಅಸೆಂಡ್ ಸರಣಿಗಳು