alex Certify ಯಾರಿದು ಮುಲ್ಲಾ ಮೊಹಮ್ಮದ್ ಹಸನ್..? ಇಲ್ಲಿದೆ ತಾಲಿಬಾನ್‌ ಸರ್ಕಾರದ ಮುಖ್ಯಸ್ಥನ ಕುರಿತು ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರಿದು ಮುಲ್ಲಾ ಮೊಹಮ್ಮದ್ ಹಸನ್..? ಇಲ್ಲಿದೆ ತಾಲಿಬಾನ್‌ ಸರ್ಕಾರದ ಮುಖ್ಯಸ್ಥನ ಕುರಿತು ಒಂದಿಷ್ಟು ಮಾಹಿತಿ

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್, ಹೊಸ ಸರಕಾರವನ್ನು ಮುನ್ನಡೆಸಲಿದ್ದಾನೆ.

ಕಳೆದ ವಾರಾಂತ್ಯದಲ್ಲಿ ಪಾಕ್ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ನಂತರ ಅಖುಂಡ್ ರನ್ನು ಮುಖ್ಯಸ್ಥರನ್ನಾಗಿ ಘೋಷಿಸಲಾಯಿತು.

ಮುಲ್ಲಾ ಹಸನ್ ಅಖುಂಡ್ ಬಗೆಗಿನ ಕೆಲವು ಪ್ರಮುಖ ಅಂಶಗಳು ಇಂತಿವೆ:

– 20 ವರ್ಷಗಳ ಕಾಲ ತಾಲಿಬಾನ್ ನಾಯಕತ್ವ ಮಂಡಳಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ‘ರೆಹಬರಿ ಶುರಾ’ದ ಮುಖ್ಯಸ್ಥನಾಗಿದ್ದ.

– 2001ರಲ್ಲಿ ಯುಎಸ್ ಜೊತೆ ಯುದ್ಧ ಆರಂಭವಾಗುವ ಮೊದಲು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದಲ್ಲಿ ಈತ ಮಂತ್ರಿಯಾಗಿದ್ದ.

ಸೆರೆಯಿಂದ ಬಿಡುಗಡೆಯಾದ ಖೈದಿಗಳಿಂದ ಮಹಿಳಾ ನ್ಯಾಯಾಧೀಶರ ಜೀವಕ್ಕಿದೆ ಆಪತ್ತು

– ಮಿಲಿಟರಿ ನಾಯಕನಿಗಿಂತ ಹೆಚ್ಚು ಧಾರ್ಮಿಕ ವ್ಯಕ್ತಿ ಎಂದು ತಿಳಿದು ಬಂದಿದೆ. ತಾಲಿಬಾನ್ ನ ಆಧ್ಯಾತ್ಮಿಕ ನಾಯಕ ಶೇಖ್ ಹಿಬತುಲ್ಲಾ ಅಖುಂದ್ಜಾಡಾನ ನಿಕಟವರ್ತಿ ಎಂದು ಹೇಳಲಾಗಿದೆ.

– ತಾಲಿಬಾನ್ ಜನ್ಮಸ್ಥಳವಾದ ಕಂದಹಾರ್ ನವನು. ಸಶಸ್ತ್ರ ಚಳುವಳಿಯ ಸ್ಥಾಪಕರಲ್ಲಿ ಒಬ್ಬನಾಗಿದ್ದ.

– 2001ರಲ್ಲಿ ಸಾಂಪ್ರದಾಯಿಕ ಬಾಮಿಯನ್ ಬುದ್ಧ ಪ್ರತಿಮೆ ನಾಶವನ್ನು ಅನುಮೋದಿಸಿದಲ್ಲದೆ, ಇದನ್ನು ಧಾರ್ಮಿಕ ಕರ್ತವ್ಯ ಎಂದು ಘೋಷಿಸಿದ್ದ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...