ಒಬ್ಬ ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ 6 ರಿಂದ 8 ಗಂಟೆಗಳ ನಿದ್ದೆ ಬೇಕು ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ. ಅದರಲ್ಲೂ ರಾತ್ರಿ ಮಾಡುವ ನಿದ್ದೆ ಆರೋಗ್ಯಕ್ಕೆ ಅತ್ಯುತ್ತಮ. ಆದರೆ ಇಲ್ಲೊಬ್ಬಳು ಮಹಿಳೆಯ ಹೇಳಿಕೆಗೆ ಸದ್ಯ ವೈದ್ಯರು ಶಾಕ್ ಆಗಿದ್ದಾರೆ.
ಚೀನಾದ ಲಿ ಝನಿಂಗ್ ಎಂಬಾಕೆ ತನ್ನ ಬಾಲ್ಯದಿಂದಲೂ ಒಂದು ರಾತ್ರಿ ಕೂಡ ಮಲಗಿಲ್ಲವಂತೆ. ಆಕೆ 5 ವರ್ಷದವಳಿದ್ದಾಗ ಕೊನೆಯ ಬಾರಿಗೆ ಮಲಗಿದ್ದಳಂತೆ. ಈ ಸುದ್ದಿ ವೈದ್ಯಲೋಕಕ್ಕೆ ಸವಾಲಾಗಿದೆ.
ಆರಂಭದಲ್ಲಿ ನೆರೆಹೊರೆಯವರು ಇದು ಸುಳ್ಳು ಸುದ್ದಿ ಎಂದು ಅಂದುಕೊಂಡಿದ್ದರಂತೆ. ಅದಕ್ಕಾಗಿ ಆಕೆಯನ್ನು ಪರೀಕ್ಷಿಸಲು ರಾತ್ರಿಯಿಡೀ ಅವಳೊಂದಿಗೆ ಎಚ್ಚರವಾಗಿರಲು ಪ್ರಯತ್ನಿಸಿದ್ದಾರೆ. ಹಾಗೂ ಟೈಂ ಪಾಸ್ ಗಾಗಿ ಲೀ ಜೊತೆ ಕಾರ್ಡ್ ಆಡುತ್ತಿದ್ದರಂತೆ. ನಿದ್ದೆ ತಡೆಯಲಾರದೆ ಕೆಲವರು ಮೇಜಿನ ಮೇಲೆ ಮಲಗಿದ್ದರೆ, ಇನ್ನೂ ಕೆಲವರು ಮನೆಗೆ ಮರಳಿದ್ದಾರೆ. ಅದಗ್ಯೂ ಲೀ ಮಾತ್ರ ಎಚ್ಚರವಾಗಿರುತ್ತಿದ್ದಳಂತೆ.
ಏಳು ವರ್ಷದ ಹಿಂದೆ ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಸಿಕ್ಕಿದ್ದೆಲ್ಲಿ ಗೊತ್ತಾ….?
ಇನ್ನು ಲೀ ಪತಿ ಲುಯಿ ಸುಕ್ವಿನ್ ಅವರು ತಮ್ಮ ಪತ್ನಿ ನಿದ್ರಿಸುವುದನ್ನು ನೋಡಿಲ್ಲ ಎಂದು ಹೇಳಿದ್ದಾರೆ. ವಿಶ್ರಾಂತಿ ಪಡೆಯುವ ಬದಲು ರಾತ್ರಿ ವೇಳೆ ಆಕೆ ಮನೆ ಸ್ವಚ್ಛಗೊಳಿಸುತ್ತಾಳೆ ಎಂದು ತಿಳಿಸಿದ್ದಾರೆ. ಮೊದಲಿಗೆ ಲುಯಿ ತನ್ನ ಪತ್ನಿಗೆ ನಿದ್ರಾಹೀನತೆ ಸಮಸ್ಯೆ ಉಂಟಾಗಿದ್ದಿರಬಹುದು ಎಂದು ಭಾವಿಸಿ, ಆಕೆಗಾಗಿ ನಿದ್ದೆ ಮಾತ್ರೆಗಳನ್ನು ಸಹ ಖರೀದಿಸಿದ್ದ. ಆದರೆ ಔಷಧಗಳು ಯಾವುದೇ ಪರಿಣಾಮ ಬೀರಿಲ್ಲ.
ಇನ್ನು ವೈದ್ಯರು ಗಮನಿಸಿದ ಪ್ರಕಾರ ಲೀ ನಿದ್ದೆಗೆ ಜಾರುತ್ತಾಳೆ ಎಂದು ಹೇಳಿದ್ದಾರೆ. ಅವಳು ತನ್ನ ಗಂಡನೊಂದಿಗೆ ಮಾತನಾಡುವಾಗ ಅವಳನ್ನು ಗಮನಿಸಲಾಯಿತು. ಲೀ ಅವರ ಕಣ್ಣುಗಳು ನಿದ್ದೆಗೆ ನಿಧಾನವಾಗಿ ಜಾರುವುದನ್ನು ವೈದ್ಯರು ಕಂಡುಕೊಂಡಿದ್ದಾರೆ. ಆಕೆಯ ಪತಿಯೊಂದಿಗೆ ಸಂಭಾಷಣೆ ಮುಂದುವರೆಸಿದರೂ ಅವಳು ನಿಜವಾಗಿಯೂ ನಿದ್ರಿಸುವುದನ್ನು ವೈದ್ಯರು ಗಮನಿಸಿದ್ದಾರೆ. ಬ್ರೇನ್ ವೇವ್ ಮಾನಿಟರ್ ನ ಪರೀಕ್ಷೆಯು ಲಿ ಅವರ ಕಣ್ಣುಗಳು ದಿನಕ್ಕೆ 10 ನಿಮಿಷಗಳಿಗಿಂತ ಹೆಚ್ಚು ಮುಚ್ಚಿಲ್ಲ ಎಂದು ತೋರಿಸಿದೆ ಎನ್ನಲಾಗಿದೆ.