ಸೈಯದ್ ಅಲಿ ಗಿಲಾನಿ ಅಂತ್ಯಕ್ರಿಯೆ ವದಂತಿಗೆ ತೆರೆ ಎಳೆಯಲು ವಿಡಿಯೋ ರಿಲೀಸ್ ಮಾಡಿದ ಕಾಶ್ಮೀರ ಪೊಲೀಸರು….! 08-09-2021 6:13AM IST / No Comments / Posted In: Latest News, India, Live News ಕಾಶ್ಮೀರ ಪ್ರತ್ಯೇಕತಾವಾದಿ ಹಾಗೂ ಹಿರಿಯ ನಾಯಕ ಸೈಯದ್ ಅಲಿ ಗಿಲಾನಿ ಮೃತದೇಹವನ್ನು ಅಪವಿತ್ರಗೊಳಿಸಲಾಗಿದೆ ಎಂಬ ವದಂತಿಗಳಿಗೆ ತೆರೆ ಎಳೆಯುವ ನಿಮಿತ್ತ ಕಾಶ್ಮೀರ ಪೊಲೀಸರು ಅವರ ಅಂತ್ಯಕ್ರಿಯೆಯ ವಿಡಿಯೋ ಕ್ಲಿಪ್ನ್ನು ಪೋಸ್ಟ್ ಮಾಡಿದ್ದಾರೆ. ಇಸ್ಲಾಮಿಕ್ ವಿಧಿಯ ಅನುಸಾರ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಗಿಲಾನಿಗೆ ಸೂಕ್ತ ಅಂತ್ಯಕ್ರಿಯೆ ನಡೆಸಲಾಗಿದೆ ಅನ್ನೋದಕ್ಕೆ ವಿಡಿಯೋ ಮೂಲಕ ಸಾಕ್ಷ್ಯ ಒದಗಿಸಿದ್ದಾರೆ. ಗಿಲಾನಿ ಅವರ ಮೃತದೇಹವನ್ನು ಶ್ವೇತ ವರ್ಣದ ವಸ್ತ್ರದಲ್ಲಿ ಇರಿಸಲಾಗಿತ್ತು. ಮೃತದೇಹಕ್ಕೆ ಪವಿತ್ರ ಕುರಾನ್ನ ಮಂತ್ರಗಳನ್ನು ಪಠಿಸಲಾಗಿದೆ. ಹಿರಿಯ ನಾಯಕ ಸೈಯದ್ ಅಲಿ ಗಿಲಾನಿ ಬುಧವಾರ ರಾತ್ರಿ 10:35ರ ಸುಮಾರಿಗೆ ನಿಧನರಾಗಿದ್ದರು. ಗಿಲಾನಿ ನಿಧನದ ಬಳಿಕ ಕಣಿವೆ ರಾಜ್ಯದಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಸೌಲಭ್ಯಗಳನ್ನು ಸ್ಥಗಿತಗೊಳಸಿಲಾಗಿತ್ತು. ಆದರೆ ಇದೀಗ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸರ್ಕಾರಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. Visuals from the graveyard during burial of SAS Geelani. pic.twitter.com/ndvcHx5xtG — Kashmir Zone Police (@KashmirPolice) September 6, 2021