ಪುಣೆ: ಬೈಕ್ ಸವಾರ ಹಾಗೂ ದಾರಿಯಲ್ಲಿ ನಡೆದುಹೋಗುತ್ತಿದ್ದ ವೃದ್ಧನ ಮೇಲೆ ಗಾಯಗೊಂಡ ಕತ್ತೆ ಕಿರುಬ ದಾಳಿ ಮಾಡಿದ್ದು, ನಂತರ ಈ ಪ್ರಾಣಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಖೇಡ್ ತಾಲೂಕಿನ ಖಾರ್ಪುಡಿ ಗ್ರಾಮದಲ್ಲಿ ನಡೆದಿದೆ.
ಏಳು ವರ್ಷದ ಹಿಂದೆ ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಸಿಕ್ಕಿದ್ದೆಲ್ಲಿ ಗೊತ್ತಾ….?
ವೃದ್ಧನ ಮೇಲೆ ಕತ್ತೆಕಿರುಬ ಏಕಾಏಕಿ ದಾಳಿ ಮಾಡಿರುವ ದೃಶ್ಯವನ್ನು ದಾರಿಹೋಕರು ಸೆರೆಹಿಡಿದಿದ್ದಾರೆ. ಖಾರ್ಪುಡಿ ಗ್ರಾಮದಲ್ಲಿ ಕತ್ತೆ ಕಿರುಬನ ದಾಳಿಯಿಂದ ಒಬ್ಬ ವೃದ್ಧ ಹಾಗೂ ಬೈಕ್ ಸವಾರ ಗಾಯಗೊಂಡಿದ್ದಾರೆ.
“ಗಾಯಗೊಂಡಿದ್ದ ಕತ್ತೆಕಿರುಬ ಇಬ್ಬರ ಮೇಲೆ ದಾಳಿ ಮಾಡಿದೆ. ನಂತರ ಅದು ಮೃತಪಟ್ಟಿತು. ಗಾಯದಿಂದ ಉಂಟಾದ ನೋವಿನಿಂದ ಅದು ಈ ರೀತಿ ದಾಳಿ ಮಾಡಿರಬಹುದು” ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಯರಾಮೇಗೌಡ ಹೇಳಿದ್ದಾರೆ.
https://www.youtube.com/watch?v=O7jmSuyw08s