ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು, ಏಳು ವರ್ಷಗಳ ನಂತರ ಉತ್ತರ ಪ್ರದೇಶದ ವೃಂದಾವನದಲ್ಲಿ ನಾಲ್ಕು ಮಕ್ಕಳ ತಂದೆಯೊಂದಿಗೆ ವಾಸಿಸುತ್ತಿರುವ ಘಟನೆ ನಡೆದಿದೆ.
2014ರಲ್ಲಿ ಎರಡು ಮಕ್ಕಳ ತಾಯಿ ತನ್ನ ಮಾಜಿ ಭೂಮಾಲೀಕನೊಂದಿಗೆ ಪರಾರಿಯಾಗಿದ್ದಳು. ಹಾಗೂ ಅಂದಿನಿಂದ ವೃಂದಾವನದಲ್ಲಿ ಆತನ ಪತ್ನಿಯಾಗಿ ಜೀವನ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ವಾಲಿಯರ್ ನ ಹಜೀರಾ ಪ್ರದೇಶದ ನಿವಾಸಿ ಜಿತೇಂದ್ರ ಸಿಂಗ್ ಕುಶ್ವಾಹ 15 ವರ್ಷಗಳ ಹಿಂದೆ ಮೊರೆನಾ ಜಿಲ್ಲೆಯ ಗ್ರಾಮವೊಂದರ ಸುಧಾ ಜಡೌನ್ ಎಂಬಾಕೆಯನ್ನು ವಿವಾಹವಾಗಿದ್ದರು. ಜಿತೇಂದ್ರ ತನ್ನ ಪತ್ನಿ ಹಾಗೂ ಮಕ್ಕಳನ್ನು ಗ್ವಾಲಿಯರ್ ನಲ್ಲೇ ಬಿಟ್ಟು ಜೈಪುರಕ್ಕೆ ಹೋಗಿದ್ದ. 2014ರ ಮಾರ್ಚ್ ನಲ್ಲಿ ಪತ್ನಿ ಹಾಗೂ ಮಕ್ಕಳು ನಾಪತ್ತೆಯಾಗಿರುವುದಾಗಿ ಮನೆಯ ಮಾಲೀಕರಿಂದ ಜಿತೇಂದ್ರಗೆ ವಿಚಾರ ತಿಳಿಯಿತು. ಹೆಂಡತಿ, ಮಕ್ಕಳನ್ನು ಸಾಕಷ್ಟು ಹುಡುಕಿದ ಬಳಿಕ ಜಿತೇಂದ್ರ ಗ್ವಾಲಿಯರ್ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದ.
BIG NEWS: ಶಾಸಕ ಜಮೀರ್ ಅಹ್ಮದ್ ಕೂಡ ಒಂಥರಾ ತಾಲಿಬಾನಿ; ಮಾಜಿ ಸಚಿವರಿಂದ ವಿವಾದಾತ್ಮಕ ಹೇಳಿಕೆ
ಇತ್ತೀಚೆಗೆ ಗ್ವಾಲಿಯರ್ ಪೊಲೀಸರು ನಾಪತ್ತೆಯಾದವರನ್ನು ಹುಡುಕಲು ಆಪರೇಷನ್ ಮಸ್ಕಾನ್ ನನ್ನು ಪ್ರಾರಂಭಿಸಿತು. ಈ ವೇಳೆ ಹಳೆಯ ಕಾಣೆಯಾದ ದೂರು ಪ್ರಕರಣಗಳು ಸಹ ತೆರೆಯಲ್ಪಟ್ಟವು. ಈ ವೇಳೆ ಸುನಿಲ್ ಜಡೌನ್ ಎಂಬಾತನೊಂದಿಗೆ ಸುಧಾ ಪರಾರಿಯಾಗಿರಬಹುದು ಎಂದು ಜಿತೇಂದ್ರನ ಸಂಬಂಧಿಕರು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುನಿಲ್ ಅವರ ಮೊಬೈಲ್ ಚಲನವಲನದ ಮೇಲೆ ನಿಗಾ ಇಟ್ಟಾಗ, ಅವರು ಉತ್ತರ ಪ್ರದೇಶದಲ್ಲಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಸುನಿಲ್ ಮೇಲೆ ನಿಗಾ ಇಡಲು ಪೊಲೀಸರ ತಂಡ ರಚಿಸಲಾಯಿತು. ತಂಡದ ಸದಸ್ಯರು ವೃಂದಾವನದವರೆಗೂ ಹಿಂಬಾಲಿಸಿ, ಅಲ್ಲಿ ಸುನಿಲ್ ಪತ್ನಿಯಾಗಿ ಸುಧಾ ಇರುವುದನ್ನು ಪೊಲೀಸರು ಕಂಡುಕೊಂಡರು. ಅಲ್ಲದೆ ಜಿತೇಂದ್ರನ ಜೊತೆ ಹೋಗದೆ ಸುನಿಲ್ ಜೊತೆಯೇ ಇರುವುದಾಗಿ ಆಕೆ ಪೊಲೀಸರಲ್ಲಿ ಕೇಳಿಕೊಂಡಳು ಎನ್ನಲಾಗಿದೆ.