ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ದೇಶವಾಸಿಗಳ ಕಣ್ಮಣಿಯಾಗಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಬ್ರಾಂಡ್ ಮೌಲ್ಯದಲ್ಲಿ ಕಳೆದೊಂದು ತಿಂಗಳಲ್ಲಿ 1000 ಪಟ್ಟು ವರ್ಧನೆಯಾಗಿದೆ.
ತಮ್ಮ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲು ಚೋಪ್ರಾ ಮನೆ ಮುಂದೆ ಕಾರ್ಪೋರೇಟ್ ಕ್ಷೇತ್ರದ ದಿಗ್ಗಜರ ದಂಡೇ ನಿಂತಿದೆ. ನೀರಜ್ರ ಜಾಹೀರಾತು ಶುಲ್ಕದಲ್ಲಿ 10 ಪಟ್ಟು ಹೆಚ್ಚಳವಾಗಿದೆ ಎಂದು ಅಥ್ಲೀಟ್ನ ಸಾರ್ವಜನಿಕ ಸಂಪರ್ಕ ಚಟುವಟಿಕೆಗಳನ್ನು ನೋಡಿಕೊಳ್ಳುವ ಜೆಎಸ್ಡಬ್ಲ್ಯೂ ತಿಳಿಸಿದೆ.
ಮುಂಬರುವ ದಿನಗಳಲ್ಲಿ ಲಕ್ಸುರಿ ಆಟೋ ಹಾಗೂ ಅಪೇರಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ 5-6 ಡೀಲ್ಗಳಿಗೆ ನೀರಜ್ ಸಹಿ ಮಾಡುವ ಸಾಧ್ಯತೆ ಇದೆ ಎಂದು ಜೆಎಸ್ಡಬ್ಲ್ಯೂ ತಿಳಿಸಿದೆ.
ಸಲಿಂಗಿಗಳಿಗೆ ನೆರವಾಗುವ ನೀತಿ ರೂಪಿಸಿದ ಆ್ಯಕ್ಸಿಸ್ ಬ್ಯಾಂಕ್
ನೀರಜ್ ಅದಾಗಲೇ ಬೈಜೂಸ್, ಟಾಟಾ ಎಐಎ ಜೀವ ವಿಮೆ ಹಾಗೂ ಅಗ್ರ ಫರ್ಮಾ ಕಂಪನಿಯೊಂದರೊಂದಿಗೆ ಡೀಲ್ಗಳಿಗೆ ಸಹಿ ಮಾಡಿದ್ದಾರೆ. ಇದರೊಂದಿಗೆ ಜಿಲೆಟ್, ಎಕ್ಸಾನ್ ಮೊಬಿಲ್ ಹಾಗೂ ಮಸಲ್ ಬ್ಲೇಜ಼್ಗಳಿಗೂ ಸಹ ನೀರಜ್ ಪ್ರಚಾರ ರಾಯಭಾರಿಯಾಗಿದ್ದಾರೆ.
ಪ್ರಚಾರ ರಾಯಭಾರಿಯಾಗಲು ನೀರಜ್ ವರ್ಷವೊಂದಕ್ಕೆ 2.5 ಕೋಟಿ ರೂ. ಚಾರ್ಜ್ ಮಾಡುತ್ತಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೇ ಕೆಲಸಕ್ಕೆ ವರ್ಷವೊಂದಕ್ಕೆ 1-5 ಕೋಟಿ ಚಾರ್ಜ್ ಮಾಡುತ್ತಾರೆ. ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸಹ ಹೆಚ್ಚೂ ಕಡಿಮೆ ಇದೇ ಮೊತ್ತ ಪಡೆಯುತ್ತಾರೆ.