ಪ್ರಪಂಚದಲ್ಲಿ ಮಹಿಳೆ ಮತ್ತು ಪುರುಷರಿಗೆ ತಲೆ ಕೂದಲು ಉದುರುವಿಕೆ ಪ್ರಾರಂಭವಾಗುತ್ತಿದ್ದಂತೆ ಬೋಡು ತಲೆಯಾಗುವ ಭಯವಿರುತ್ತದೆ. ಆದರೆ ಈ ಹೊಸ ಬದಲಾವಣೆಯನ್ನು ಒಪ್ಪಿಕೊಂಡು, ಈ ಭಾವನಾತ್ಮಕ ವಿಷಯದಿಂದ ಹೊರ ಬರಲು ಪ್ರಯತ್ನಿಸುವವರುಂಟು.
ಕೆಲವರು ಸೃಜನಾತ್ಮಕತೆಯಿಂದ ಬೋಡು ತಲೆಯನ್ನು ಹೊಸ ಶೈಲಿಗೆ ಬದಲಾಯಿಸುತ್ತಾರೆ. ಇದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾರೆ. ಅಮೇರಿಕಾದ ರಾಪರ್ ರಾಮಿ ಈವನ್ಐಶ್ ಬೋಡು ತಲೆಯವರಿಗಾಗಿ ಫ್ಯಾಷನ್ ಉತ್ಸವ ಪ್ರಾರಂಭಿಸಿದ್ದಾರೆ.
ರಾಮಿ ಅವರು ನವ ಯಾರ್ಕ್ ಪೋಸ್ಟ್ ಗೆ ಸಂದರ್ಶನ ನೀಡುವ ವೇಳೆಯಲ್ಲಿ ಬಾಲ್ಡ್ ಫೆಸ್ಟ್ ಎಂಬ ಉತ್ಸವ ತಮ್ಮತನವನ್ನು ಆಚರಿಸಿಕೊಳ್ಳಲು ವೇದಿಕೆ ಆಗಲಿದೆ.
ತಲೆಗೂದಲು ಕಳೆದುಕೊಳ್ಳುತ್ತಿರುವವರು, ಬೋಡು ತಲೆ ಹೊಂದಿರುವವರು ಈ ಉತ್ಸವದಲ್ಲಿ ಭಾಗವಹಿಸಬಹುದು. ಇದು ಫ್ಯಾಷನ್ ವೀಕ್ ಎಂಬ ಉತ್ಸವಕ್ಕೆ ವಿರೋಧವಾಗಿದ್ದು, ಜನರು ತಮ್ಮಲ್ಲಿ ಇರದುದನ್ನು ಆಚರಿಸಿಕೊಳ್ಳುವ ಉದ್ದೇಶವೇ ಈ ಉತ್ಸವ.
ಉತ್ಸವವು ರೂಬುಲಾಡ್ ಕ್ಲಬ್ ನಲ್ಲಿ ನಡೆಯಲಿದ್ದು, ಟಿಕೆಟ್ ಬೆಲೆ 18 ಡಾಲರ್. ಟಿಕೇಟನ್ನು ಆನ್ಲೈನ್ ಅಥವಾ ಕ್ಲಬ್ ನಲ್ಲಿ ಪಡೆಯಬಹುದಾಗಿದೆ. ಇದರಲ್ಲಿ ಪ್ರೇರಣೆ ನೀಡುವ ಮಾತುಗಾರರು ಮಾತ್ರವಲ್ಲ, ಮನರಂಜನೆಯಿಂದ ಕೂಡಿದ ಕಾರ್ಯಕ್ರಮ ಇದಾಗಲಿದೆ. ಬೋಡು ತಲೆಯವರನ್ನು ಒಂದೆಡೆ ಸೇರಿಸಿ, ಒಳ್ಳೆ ರೀತಿಯಲ್ಲಿ ಆಚರಿಸಲಾಗುವುದು. ಬೋಡು ತಲೆಯ ಭಯ ಹೋಗಬೇಕಿದೆ. ಅಮೇರಿಕಾದಲ್ಲಿ ಬೋಡು ತಲೆಯ ಡಾಟಾ ಭಯ ತರಿಸುತ್ತದೆ ಎಂಬ ಅಭಿಪ್ರಾಯ ಆಯೋಜಕದ್ದು.
ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅಧ್ಯಯನದ ಪ್ರಕಾರ ಅಮೇರಿಕ ದೇಶದಲ್ಲಿ 50 ಮಿಲಿಯನ್ ಪುರುಷರು ಮತ್ತು 30 ಮಿಲಿಯನ್ ಮಹಿಳೆಯರು ಬೋಡಾಗಿದ್ದು ಅಥವಾ ಬೋಡಾಗುವ ಭೀತಿಯಲ್ಲಿದ್ದಾರೆ