ಅಂಚೆ ಕಚೇರಿ, ಗ್ರಾಹಕರಿಗೆ ಅನೇಕ ಹೂಡಿಕೆ ಯೋಜನೆಗಳನ್ನು ನೀಡ್ತಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಅಂಚೆ ಕಚೇರಿ ಕೆಲ ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ ಹೆಚ್ಚು ಲಾಭಕರವಾಗಿದೆ. ಶೇಕಡಾ 7.4ರ ಬಡ್ಡಿ ಇದ್ರಲ್ಲಿ ಸಿಗುತ್ತದೆ. 5 ವರ್ಷಗಳಲ್ಲಿ 14 ಲಕ್ಷ ರೂಪಾಯಿಯನ್ನು ಹಿರಿಯ ನಾಗರಿಕರು ಪಡೆಯಬಹುದಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಖಾತೆ ತೆರೆಯಲು ಗ್ರಾಹಕರ ವಯಸ್ಸು 60 ವರ್ಷ ಮೇಲ್ಪಟ್ಟಿರಬೇಕು. 60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಖಾತೆ ತೆರೆಯಬಹುದು. ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ತೆಗೆದುಕೊಂಡ ಜನರು ಸಹ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು.
ಹಿರಿಯ ನಾಗರಿಕರ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ವಾರ್ಷಿಕ ಶೇಕಡಾ 7.4ರ ಬಡ್ಡಿ ದರದಲ್ಲಿ ಐದು ವರ್ಷಗಳ ಮುಕ್ತಾಯದ ನಂತ್ರ ಒಟ್ಟು 14,28,964 ಅಂದರೆ 14 ಲಕ್ಷ ರೂಪಾಯಿ ಸಿಗುತ್ತದೆ. 4,28,964 ರೂಪಯಿ ಬಡ್ಡಿ ನಿಮಗೆ ಸಿಗುತ್ತದೆ.
ಈ ಯೋಜನೆಯಲ್ಲಿ ಖಾತೆ ತೆರೆಯುವ ಕನಿಷ್ಠ ಮೊತ್ತ 1000 ರೂಪಾಯಿ. ಗರಿಷ್ಠ ಮೊತ್ತ 15 ಲಕ್ಷ. ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಹೂಡಿಕೆ ಮಾಡುವುದಾದಲ್ಲಿ ನಗದು ಪಾವತಿ ಮಾಡಬಹುದು. ಒಂದು ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡುವವರು ಚೆಕ್ ನೀಡಬೇಕಾಗುತ್ತದೆ. ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗಲಿದೆ. ಎಸ್ಸಿಎಸ್ಎಸ್ ಯೋಜನೆ ಮುಕ್ತಾಯದ ಅವಧಿ 5 ವರ್ಷಗಳು.