ಇಸ್ಲಾಂ ಧರ್ಮವು ಭಾರತಕ್ಕೆ ಅಕ್ರಮಣಕಾರರೊಂದಿಗೆ ಬಂದಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಪುಣೆಯಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳಿಗೆ ಒಬ್ಬರೇ ಪೂರ್ವಜರಿದ್ದು, ಪ್ರತಿಯೊಬ್ಬ ಭಾರತೀಯ, ಹಿಂದೂ ಎಂದು ಪರಿಗಣಿಸಬೇಕು ಎಂದಿದ್ದಾರೆ.
”ದೇಶ ಮೊದಲು, ದೇಶ ಶ್ರೇಷ್ಠ ”ಎಂಬ ಸೆಮಿನಾರ್ ನಲ್ಲಿ ಮಾತನಾಡುತ್ತಿದ್ದ ಅವರು, ಭಾರತಕ್ಕೆ ಇಸ್ಲಾಂ, ಆಕ್ರಮಣಕಾರರೊಂದಿಗೆ ಬಂದಿದೆ ಹಾಗೂ ಈ ವಿಚಾರವನ್ನು ಮುಚ್ಚಿಡಬಾರದು. ಇದು ಇತಿಹಾಸ ಎಂದು ತಿಳಿಸಿದ್ದಾರೆ.
BIG NEWS: ಸಚಿವ ಮುರುಗೇಶ್ ನಿರಾಣಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ
ಮುಸ್ಲಿಂ ನೇತಾರರು ಅನಗತ್ಯ ವಿಷಯಗಳನ್ನು ವಿರೋಧಿಸಬೇಕು ಮತ್ತು ಮೂಲಭೂತವಾದಿಗಳ ವಿರುದ್ದ ಧ್ವನಿ ಎತ್ತಬೇಕು. ಇದನ್ನು ಅತ್ಯಂತ ಶೀಘ್ರದಲ್ಲಿ ಮಾಡಬೇಕು. ಬೇಗ ಮಾಡಿದಷ್ಟು ಸಮಾಜಕ್ಕೆ ಕಡಿಮೆ ನಷ್ಟ ಎಂದಿದ್ದಾರೆ.
ಮುಸ್ಲಿಮರು ಭಾರತ ದೇಶದಲ್ಲಿ ಹೆದರಿಕೊಂಡು ಜೀವಿಸಬಾರದು, ಹಿಂದುಗಳಿಗೆ ಇವರ ಬಗ್ಗೆ ವಿರೋಧವಿಲ್ಲ. ದೇಶ ವಿರೋಧಿಗಳು ಮಾತ್ರ ಮುಸ್ಲಿಮರನ್ನು ಬೇರೆ ಎಂದು ಬಿಂಬಿಸುತ್ತಿದ್ದಾರೆ. ಇದೊಂದು ಷಡ್ಯಂತ್ರ ಮತ್ತು ಯಾರೂ ಸಿಲುಕಬಾರದು ಎಂದು ಹೇಳಿದ್ದಾರೆ. ನಾವೆಲ್ಲರೂ ಒಂದೇ ಎಂಬ ಮಾತನ್ನು ಹೇಳಿದ್ದಾರೆ.
ಹಿಂದೂ ಎನ್ನುವುದು ತಾಯಿನಾಡಿಗೆ, ಪೂರ್ವಜರಿಗೆ ಮತ್ತು ಭಾರತದ ಸಂಸ್ಕೃತಿಯ ಪ್ರತೀಕ. ನಾವು ಭಾರತೀಯತೆ ಬಗ್ಗೆ ನೋಡಬೇಕಿದೆ, ಮುಸ್ಲಿಂ ಬಗ್ಗೆ ಅಲ್ಲ ಎಂದು ಸಾರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯದ ಗವರ್ನರ್ ಆರಿಫ್ ಮೊಹಮ್ಮದ್, ಸೆಂಟ್ರಲ್ ಕಾಶ್ಮೀರ ವಿಶ್ವವಿದ್ಯಾಲಯದ ಕುಲಪತಿ ಭಾಗವಹಿಸಿದ್ದರು.