80 ವರ್ಷದ ಫುಟ್ಬಾಲ್ ದಂತಕತೆ ‘ಪೀಲೆ’ ಅವರು ಕಳೆದ ಆರು ದಿನಗಳಿಂದಲೂ ಸಾವೊ ಪೌಲೊದ ಆಲ್ಬರ್ಟ್ ಐನ್ಸ್ಟೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಆದರೆ ಅವರ ಮ್ಯಾನೇಜರ್ ಜೋ ಫ್ರಾಗಾ ಮಾತ್ರ, ಅಭಿಮಾನಿಗಳು ಚಿಂತೆಪಡುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
ಇನ್ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಸಣ್ಣ ಸಂದೇಶ ಪೋಸ್ಟ್ ಮಾಡಿರುವ ಬ್ರೆಜಿಲ್ನ ಸಾರ್ವಕಾಲಿಕ ಶ್ರೇಷ್ಟ ಫುಟ್ಬಾಲಿಗ ಪೀಲೆ, ” ನಾನು ಪ್ರಜ್ಞಾಶೂನ್ಯನಾಗಿಲ್ಲ, ಆರೋಗ್ಯವಾಗಿದ್ದೇನೆ. ನಿಯಮಿತ ತಪಾಸಣೆಗೆ ಒಳಗಾಗಲು ಕೊರೊನಾ ಸಾಂಕ್ರಾಮಿಕದಿಂದಾಗಿ ಆಗಿರಲಿಲ್ಲ. ಹಾಗಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿ ಕೂಲಂಕುಷ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ.
’ಹಂಚಿಕೊಳ್ಳಲು ಬಹಳಷ್ಟು ಕಥೆಗಳಿವೆ’: ಅಫ್ಘಾನಿಸ್ತಾನ ತೊರೆದ ಪಾಪ್ ತಾರೆ ಹೇಳಿಕೆ
ಆದರೆ ಬ್ರೆಜಿಲ್ನ ಸ್ಥಳೀಯ ಮಾಧ್ಯಮಗಳ ಪ್ರಕಾರ ಪೀಲೆ ಅವರಿಗೆ ಟ್ಯೂಮರ್ ಒಂದನ್ನು ತೆಗೆದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹಾಗಾಗಿ ಅವರು ತೀವ್ರ ನಿಗಾದಲ್ಲಿದ್ದು, ಕೊರೊನಾ ಸೋಂಕು ತಗುಲದಂತೆ ಭಾರಿ ಮುಂಜಾಗ್ರತೆಯಲ್ಲಿ ಅವರನ್ನು ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಲಾಗುತ್ತಿದೆಯಂತೆ.
https://www.instagram.com/p/CTP-bS-HzaY/?utm_source=ig_embed&ig_rid=4de8df5c-d98b-452c-8c83-f6b1e64d19b3