alex Certify ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾದ ಇನ್ನಿಬ್ಬರು ಕೋಚ್​ಗಳಿಗೆ ಕೊರೊನಾ ಸೋಂಕು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾದ ಇನ್ನಿಬ್ಬರು ಕೋಚ್​ಗಳಿಗೆ ಕೊರೊನಾ ಸೋಂಕು..!

ಇಂಗ್ಲೆಂಡ್​ ವಿರುದ್ದದ ಸರಣಿಗೆ ಟೀಂ ಇಂಡಿಯಾದ ಮೂವರು ಕೋಚ್​ಗಳ ಅನುಪಸ್ಥಿತಿ ಕಾಡುವ ಸಾಧ್ಯತೆ ಇದೆ. ಕೋಚ್​ ರವಿ ಶಾಸ್ತ್ರಿ ಕೊರೊನಾ ಸೋಂಕಿಗೆ ಒಳಗಾದ ಬೆನ್ನಲ್ಲೇ ಪ್ರಾಥಮಿಕ ಸಂಪರ್ಕಿತರಾದ ಇನ್ನಿಬ್ಬರು ಕೋಚ್​ಗಳು ಸಹ ಸೋಂಕಿಗೆ ಒಳಗಾಗಿದ್ದಾರೆ.

ಆರ್​ಟಿ ಪಿಸಿಆರ್​ ಟೆಸ್ಟ್​​ನಲ್ಲಿ ಬೌಲಿಂಗ್​ ವಿಭಾಗದ ತರಬೇತುದಾರ ಭರತ್​ ಅರುಣ್​ ಹಾಗೂ ಫೀಲ್ಡಿಂಗ್​ ಕೋಚ್​ ಆರ್​. ಶ್ರೀಧರ್​​ ಕೋವಿಡ್​ ಪಾಸಿಟಿವ್​ ವರದಿ ಪಡೆದಿದ್ದಾರೆ.

ಅರುಣ್​ ಹಾಗೂ ಶ್ರೀಧರ್​ ಇಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದು ಐಸೋಲೇಷನ್​​ನಲ್ಲಿ ಮುಂದುವರಿಯಲಿದ್ದಾರೆ. ಹೀಗಾಗಿ 5ನೇ ಟೆಸ್ಟ್​ ಮ್ಯಾಚ್​​ನಲ್ಲಿ ಅಲಭ್ಯರಿರಲಿದ್ದಾರೆ.

ರವಿಶಾಸ್ತ್ರಿ ಹಾಗೂ ಅರುಣ್​ ಮತ್ತು ಶ್ರೀಧರ್​​​ 14 ದಿನಗಳ ಕಾಲ ಐಸೋಲೇಷನ್​ನಲ್ಲಿ ಇರಲಿದ್ದಾರೆ. ಇಂಗ್ಲೆಂಡ್​ ವಿರುದ್ಧದ 5 ನೇ ಟೆಸ್ಟ್​ ಪಂದ್ಯವು ಸೆಪ್ಟೆಂಬರ್​ 10ರಂದು ನಡೆಯಲಿದೆ.

ಕೋವಿಡ್​ 19 ಪಾಸಿಟಿವ್​ ವರದಿಯಿಂದಾಗಿ ಕೋಚ್​ಗಳು ಭಾರತಕ್ಕೆ ವಾಪಸ್ಸಾಗುವುದರಲ್ಲೂ ವಿಳಂಬವಾಗಲಿದೆ. ಶ್ರೀಲಂಕಾ ಪ್ರವಾಸದ ವೇಳೆ ಆಟಗಾರರಾದ ಕೃನಾಲ್​ ಪಾಂಡ್ಯ , ಕೃಷ್ಣಪ್ಪ ಗೌತಮ್​ ಹಾಗೂ ಯಜುವೇಂದ್ರ ಚಹಲ್​​ ಕೂಡ ಸೋಂಕಿಗೆ ಒಳಗಾಗಿದ್ದರು. ಇವರು ಕೂಡ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ ನಂತರ ತಡವಾಗಿ ಭಾರತಕ್ಕೆ ಮರಳಿದ್ದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...