ಹೈದರಾಬಾದ್: ನಿಗೂಢ ಕೊಲೆ ಪ್ರಕರಣವೊಂದನ್ನು ಪರಿಹರಿಸಿದ್ದಕ್ಕೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಾನ್ ಸ್ಟೇಬಲ್ ಗೆ ಪೊಲೀಸ್ ಇಲಾಖೆ ಬಹುಮಾನ ನೀಡಿ ಗೌರವಿಸಿದೆ.
ವೃದ್ಧೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಬಂದರ್ ತಾಲೂಕಿನ ಜಿ. ರಾಮಕೃಷ್ಣ ಎಂಬ ಪೇದೆಗೆ ಕೃಷ್ಣಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಕೌಶಲ್ ಬಹುಮಾನ ನೀಡಿದರು. ಈ ನಿಗೂಢ ಕೊಲೆ ಪ್ರಕರಣವನ್ನು ಪೇದೆ ರಾಮಕೃಷ್ಣ ಅವರು ತಮ್ಮ ಕಠಿಣ ಪರಿಶ್ರಮ ಹಾಗೂ ನಿರಂತರತೆಯ ಮುಖಾಂತರ ಭೇದಿಸಿದ್ದರು. ಹೀಗಾಗಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಗಿದೆ.
ಕೋವಿಶೀಲ್ಡ್ ಲಸಿಕೆ ಕುರಿತಂತೆ ಕೇಂದ್ರಕ್ಕೆ ಮಹತ್ವದ ನಿರ್ದೇಶನ ನೀಡಿದ ಕೇರಳ ಹೈಕೋರ್ಟ್
ವೃದ್ಧೆಯ ಸಾವಿನ ಹಿಂದಿನ ರಹಸ್ಯವನ್ನು ರಾಮಕೃಷ್ಣ ಯಶಸ್ವಿಯಾಗಿ ಭೇದಿಸಿದರು. ಆಗಸ್ಟ್ 21 ರಂದು ಬಂದರ್ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಖನ್ ಪೇಟೆಯ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು.