alex Certify ‘ಬಿಗ್ ಬಾಸ್’ ಖ್ಯಾತಿಯ ನಟಿ ಆಸ್ಪತ್ರೆಗೆ ದಾಖಲು, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೆ ಕಂಬನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ಖ್ಯಾತಿಯ ನಟಿ ಆಸ್ಪತ್ರೆಗೆ ದಾಖಲು, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೆ ಕಂಬನಿ

ನವದೆಹಲಿ: ‘ಬಿಗ್ ಬಾಸ್ 12’ ಖ್ಯಾತಿಯ ಜಸ್ಲೀನ್ ಮಾತಾರು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಇತ್ತೀಚಿನ ಆರೋಗ್ಯ ಸ್ಥಿತಿಯ ಅಪ್‌ಡೇಟ್‌ ಹಂಚಿಕೊಂಡ ಅವರು, ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನದ ನಂತರ ಕಂಬನಿ ಮಿಡಿದಿರುವ ಬಗ್ಗೆಯೂ ಮಾತನಾಡಿದ್ದಾರೆ.

‘ಬಾಲಿಕಾ ವಧು’ ನಟ ಸಿದ್ಧಾರ್ಥ್ ಶುಕ್ಲಾ ಸಾವಿನ ನಂತರ ‘ಮುಜ್ ಸೇ ಶಾದಿ ಕರೋಗೆ’ ನಟಿ ಜಸ್ಲೀನ್ ಮಾತಾರು ಹೇಳಿದ್ದು, ಜೀವನ ಎಷ್ಟು ಅನಿರೀಕ್ಷಿತವಾಗಿದೆ. ಶುಕ್ಲಾ ಸಾವಿನಿಂದ ಸಂಕಟ ಅನುಭವಿಸಿದೆ ಎಂದು ತಿಳಿಸಿದ್ದಾರೆ.

ಆ ದಿನ ಸಿದ್ದಾರ್ಥ್ ನಿಧನರಾದಾಗ ನಾನು ಅವರ ಮನೆಗೆ ಹೋಗಿದ್ದೆ. ಸಾವಿನ ಸುದ್ದಿ ಕೇಳಿದ ನಂತರ ಮತ್ತು ಅವರ ಮನೆಯ ವಾತಾವರಣವನ್ನು ನೋಡಿ, ಅವರ ಕುಟುಂಬದವರನ್ನು ಭೇಟಿಯಾದ ಮೇಲೆ ‘ತುಮ್ ಭೀ ಮಾರ್ ಜಾವೋ’ ನಂತಹ ಸಂದೇಶಗಳನ್ನು ಓದಿದ್ದೇನೆ. ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಇಂತಹ ಸಂದೇಶಗಳಿಂದ ಪ್ರಭಾವಿತಳಾಗಿದ್ದೇನೆ ಎಂದು ಆಕೆ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ನಾನು ನನ್ನಲ್ಲಿಯೇ ಯೋಚಿಸಿದೆ. ಅದೇನೆಂದರೆ, ಜೀವನ ಎಷ್ಟು ಅನಿರೀಕ್ಷಿತವಾಗಿದೆ? ಎಲ್ಲವೂ ತುಂಬಾ ವಿಚಿತ್ರವೆನಿಸುತ್ತದೆ. ಏನಾಯಿತು ಎಂದು ನನಗೆ ಗೊತ್ತಿಲ್ಲ. ನನಗೆ 103 ಡಿಗ್ರಿ ತಾಪಮಾನದ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಬೇಕಾಯಿತು. ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ನಾನು ಕೂಡ ಬೇಗ ಗುಣಮುಖನಾಗಲಿ ಎಂದು ನಿಮ್ಮ ಹಾರೈಕೆ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

‘ಮುಜ್ ಸೇ ಶಾದಿ ಕರೋ’ಗೆ ಸರಣಿಯಲ್ಲಿ ಸಿದ್ಧಾರ್ಥ್ ಶುಕ್ಲಾ ಜೊತೆ ಕೆಲಸ ಮಾಡುವ ಬಗ್ಗೆ ಜಸ್ಲೀನ್ ಹಿಂದಿನ ವೀಡಿಯೋದಲ್ಲಿ ಮಾತನಾಡಿದ್ದು, ಅವರನ್ನು ಶಾಂತ ಸ್ವಭಾವದ ಒಳ್ಳೆಯ ವ್ಯಕ್ತಿ ಎಂದು ಕೊಂಡಾಡಿದ್ದಾರೆ.

‘ಬಿಗ್ ಬಾಸ್’ 13 ವಿಜೇತ ಸಿದ್ಧಾರ್ಥ್ ಶುಕ್ಲಾ ಅವರು ತೀವ್ರ ಹೃದಯಾಘಾತದಿಂದ ಸೆಪ್ಟೆಂಬರ್ 2 ರಂದು ನಿಧನರಾದರು. ಅವರ ಅಂತಿಮ ವಿಧಿವಿಧಾನಗಳನ್ನು ಸೆಪ್ಟೆಂಬರ್ 3 ರಂದು ನಡೆಸಲಾಯಿತು. ಶೆಹ್ನಾಜ್ ಗಿಲ್, ಕರಣವೀರ್ ಬೋಹ್ರಾ, ರಾಹುಲ್ ವೈದ್ಯ, ದಿಶಾ ಪರ್ಮಾರ್, ರಾಹುಲ್ ಮಹಾಜನ್, ಅಸಿಮ್ ರಿಯಾಜ್, ಅಲಿ ಗೋಣಿ, ಅರ್ತಿ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

https://www.instagram.com/p/CTd9rHmoTMc/

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...