2021 ರ ಟಿ-20 ವಿಶ್ವಕಪ್‌ಗೆ ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17 ರಿಂದ ಯುಎಇಯಲ್ಲಿ ಟಿ-20 ವಿಶ್ವಕಪ್ ಆರಂಭವಾಗಲಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಈಗಾಗಲೇ ಟಿ 20 ವಿಶ್ವಕ್ಕೆ 15 ಸದಸ್ಯರ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದೆ. ಆದ್ರೆ ತಂಡದ ಘೋಷಣೆ ಇನ್ನೂ ಆಗಿಲ್ಲ.
ನಾಳೆ ಬೆಳಿಗ್ಗೆ ತಂಡದ ಘೋಷಣೆಯಾಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ನಾಳೆ ಮುಗಿಯಲಿದೆ. ಒಂದು ವೇಳೆ ಸೋಮವಾರ ರಾತ್ರಿಯೇ ಟೆಸ್ಟ್ ಪಂದ್ಯ ಮುಗಿದ್ರೆ ಇಂದು ರಾತ್ರಿಯೇ ತಂಡ ಘೋಷಣೆಯಾಗಲಿದೆ. ಇಲ್ಲವಾದ್ರೆ ಮಂಗಳವಾರ ಬೆಳಿಗ್ಗೆ ಪಂದ್ಯದ ಘೋಷಣೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆಗಾರರು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಭೇಟಿ ಮಾಡಿದ ನಂತರ ತಂಡವನ್ನು ಆಯ್ಕೆ ಮಾಡಿದ್ದಾರೆ. 15 ಸದಸ್ಯರ ತಂಡವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 10 ರ ಮೊದಲು 2021 ರ ಟಿ 20 ವಿಶ್ವಕಪ್‌ಗಾಗಿ ಎಲ್ಲಾ ತಂಡಗಳು ತಮ್ಮ ತಂಡಗಳನ್ನು ಘೋಷಿಸುವಂತೆ ಐಸಿಸಿ ಆದೇಶಿಸಿದೆ. ಹಾಗಾಗಿ ಸೆಪ್ಟೆಂಬರ್ 10ರೊಳಗೆ ತಂಡದ ಘೋಷಣೆಯಾಗಬೇಕಿದೆ.
ಟಿ-20 ವಿಶ್ವಕಪ್ ಗೆ 15 ಆಟಗಾರರ ಜೊತೆ ಮೂವರು ಆಟಗಾರರನ್ನು ತಂಡದ ಜೊತೆ ಇರಿಸಿಕೊಳ್ಳಲಾಗುವುದು. ಬಲಿಷ್ಠ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ ಎನ್ನಲಾಗ್ತಿದೆ. ಟಿ 20 ವಿಶ್ವಕಪ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಸಿರಾಜ್ ಅವಕಾಶ ಪಡೆದಿದ್ದಾರೆ ಎನ್ನಲಾಗ್ತಿದೆ. ಇಶಾನ್ ಕಿಶನ್, ಪೃಥ್ವಿ ಶಾ ಹಾಗೂ ಒಬ್ಬ ಸ್ಪಿನ್ನರ್ ಯುಎಇಗೆ ಮೀಸಲು ಆಟಗಾರರಾಗಿ ಹೋಗಲಿದ್ದಾರೆ ಎನ್ನಲಾಗ್ತಿದೆ. ರಾಹುಲ್ ಚಹರ್, ವರುಣ್ ಚಕ್ರವರ್ತಿ ಮತ್ತು ವಾಷಿಂಗ್ಟನ್ ಸುಂದರ್ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ.